ಪೋಸ್ಟ್‌ಗಳು

ದೀಪ ಬೆಳಗಿತು (ಕಥೆ)

           ಸಾಯಂಕಾಲದ ಸಮಯ. ಬೆಂಕಿ ಕಡ್ಡಿಯಲ್ಲಿ ಅತ್ತಿತ್ತ ಓಲಾಡುತ್ತಿದ್ದ ಕುಡಿ ಪಟಕ್ಕನೆ ದೀಪದ ಬತ್ತಿಗೆ ತಗುಲಿ ಒಮ್ಮೆಲೆ ಮತ್ತಷ್ಟು ದೊಡ್ಡದಾಗಿ ಪ್ರಜ್ವಲಿಸತೊಡಗಿತು. ಬೆಂಕಿ ಕಡ್ಡಿಯನ್ನು ನಂದಿಸಿ ಹೊರಗೆ ಎಸೆದು, ಅಡುಗೆಮನೆಗೆ ಹೋಗಿ ಚಿಕ್ಕ ಹಾಲಿನ ಲೋಟದೊಂದಿಗೆ ವಾಪಾಸಾದಳು ಅಂಬುಜಾ. ಅದನ್ನು ದೇವರ ಎದುರು ಇಟ್ಟು, ಕೈ ಮುಗಿದು ಪ್ರದಕ್ಷಿಣೆ ಮಾಡಿ ಶಿರ ಬಾಗಿ ನಮಸ್ಕಾರ ಮಾಡಿದಳು. ಮನದ ಯೋಚನೆ ಏನಿತ್ತೋ ಅದು ದೇವರ ಎದುರಲ್ಲಿ ಪ್ರಾರ್ಥನೆಯಾಯಿತು.             "ಯಲ್ ಹೋಗ್ಬಿಡಚೇನ...." ತನ್ನಷ್ಟಕ್ಕೆ ತಾನೇ ಹೇಳುತ್ತಾ ಚಪ್ಪಲಿ ಬಿಚ್ಚಿ ಪಕ್ಕದಲ್ಲಿಟ್ಟು ಚಿಂತಿತನಾಗಿ ಮನೆ ಒಳಗೆ ಬಂದ ಕೇಶವ. ಅವನ ಈ ಗೊಣಗು ಕೇಳಿಸಿಕೊಂಡ ಅಂಬುಜಾ ದೇವರ ಒಳದಿಂದ ಅಡುಗೆ ಮನೆಗೆ ಬರುತ್ತಾ ಹೇಳಿದಳು " ಬಿಡದು ಬ್ಯಾಡ ಹೇಳಿ ಸಾವ್ರ ಸರ್ತಿ ಹೇಳ್ದಿ. ನಿಂಗೌಕೆ ಯಾವಾಗ್ಲೂ ನಿಂಗಳದ್ದೇಯಾ. ಅಲ್ಲ, ಅಷ್ಟು ಗೊತ್ತಾಗ್ತಲ್ಯಾ ಹಂಗರೆ? ಗಬ್ಬದ ದನ, ತಿಂಗ್ಳ್ ತುಂಬತಾ ಇದ್ದು. ಕೆಚ್ಚಲು ಬಿಡ್ತಾ ಇದ್ದು ಅಂತ ನಿಂಗನೇ ಹೇಳಿದ್ದಿ. ಅಂತಾದ್ರಲ್ಲಿ ಇವತ್ತು ಬಿಟ್ಟಿದ್ರನ ಹಂಗರೆ...? ಇನ್ ಯಂತ ಹೇಳಕ್ಕು"           "ಯಂತಾಗ್ತಲ್ಲೆ ಸುಮ್ನಿರೇ.... ಈಗೇನ್ ಬಾಳ ಹೊತ್ತಾಗಲ್ಲೆ. ಬತ್ತಿಕ್ಕು, ನೋಡನ" ಹೆಂಡತಿಯ ಮಾತಿಗೆ ಒಂದು ಕೌಂಟರ್ ಕೊಟ್ಟಿದ್ದು ಹೌದಾದರೂ ಅವನ ತಲೆಯಲ್ಲೂ ಚಿಂತೆಯು ಹರಳುಗಟ್ಟಿತ್ತು. ಅಷ್ಟು ಹೊತ್ತಿಗೆ ಬಿಸಿ ಕಾಫಿ

'ಹಲೋ.. ನಾನು ಮ್ಯಾನೇಜರ್.... ' (ಕಥೆ)

ಸೂರ್ಯನ  ಕಿರಣಗಳ  ಝಳ  ತೀವ್ರತೆಯನ್ನು  ಪಡೆಯುತ್ತಿತ್ತು. ಕಾರು,  ಬಸ್ಸು,  ಲಾರಿ,  ಬೈಕು   ಅದು ಇದು  ಅಂತ  ವಾಹನಗಳೆಲ್ಲ  ಕೀ ಕೀ... ಪೊಂ ಪೊಂ.... ಫೆ  ಫೆ  ಹೀಗೆ  ಬೇರೆ  ಬೇರೆ  ರೀತಿಯಲ್ಲಿ  ಕಿರುಚುತ್ತಾ  ಅತ್ತ  ಇತ್ತ  ಸಾಗುತ್ತಿದ್ದವು.  ಜನಗಳು   ಯಾವ ಯಾವುದೋ  ಕೆಲಸದ  ಗಡಿಬಿಡಿಯಲ್ಲಿ  ಹೆಜ್ಜೆ  ಹಾಕುತ್ತಿದ್ದರು. ಅಂಗಡಿ  ಮುಂಗಟ್ಟುಗಳು  ತಮ್ಮ  ತಮ್ಮ  ವ್ಯಾಪಾರದಲ್ಲಿ  ಮುಳುಗಿದ್ದವು.    ಪ್ರದೇಶವೆಲ್ಲ  ಅತ್ಯಂತ  ಜೀವಂತಿಕೆಯಿಂದ,ಇಂದಿನ  ಬದುಕಿನ  ನಾಗಾಲೋಟಕ್ಕೆ  ಉದಾಹರಣೆಯಾಗಿ  ಕಂಡುಬರುತ್ತಿತ್ತು.  ಪಟ್ಟಣಗಳಲ್ಲಿ  ಇದು  ಜೀವನದ  ಸಹಜರೀತಿ.  ಈ  ಗಡಿಬಿಡಿಯ  ನಡುವೆ    ಪದೇ ಪದೇ  ಬೆವರುತ್ತಿದ್ದ  ಮುಖವನ್ನು  ತನ್ನ  ಸೆರಗಿನಿಂದ  ಒರೆಸಿಕೊಳ್ಳುತ್ತ,   ಸಾಗುವ  ವಾಹನಗಳ  ಪೈಪೋಟಿಗೆ ಬೆದರಿದಂತೆ  ರಸ್ತೆಯಂಚಿಗೆ  ನಿದಾನವಾಗಿ  ನಡೆದುಬರುತ್ತಿದ್ದವಳು  ಸುಶೀಲಮ್ಮ.     ಮನೆಯಿಂದ  10 ನಿಮಿಷ ದೂರ   ನಡೆದು  ಬರುವ  ಈ  ದಾರಿ  ಆಕೆಗೆ  ಹೊಸತೇನಲ್ಲ.  ಅದೆಷ್ಟು ಬಾರಿ  ಈ  ದಾರಿಯಲ್ಲಿ  ನಡೆದಿದ್ದಳೋ  ಏನೋ.. !?.  ಆದರೆ ಈಗ   ಇಳಿಮುಖದ  ಪ್ರಾಯ,  ಸ್ಥೂಲವಾಗುತ್ತಿದ್ದ   ದೇಹ   ಆಕೆಯ  ನಡಿಗೆಯ  ವೇಗವನ್ನು  ಕುಗ್ಗಿಸಿವೆ,  ಸುಸ್ತನ್ನು  ಹೆಚ್ಚಿಸಿವೆ .  ಈಚೀಚೆಗೆಲ್ಲ ಕೆಲವು  ಹೆಜ್ಜೆ ನಡೆಯುತ್ತಿದ್ದಂತೆ  ಏದುಸಿರು  ಪ್ರಾರಂಭವಾಗುತ್ತಿದ್ದರೂ  ಆಕೆ  ರಿಕ್ಷಾವನ್ನೋ,  ಮತ್ತೇನನ್ನೋ  ಬಳಸುವ  ಅಭ್ಯಾಸದವಳಲ್ಲ.  ಮೊದಲಿ