ಪೋಸ್ಟ್‌ಗಳು

ಭಾವ ಮಳೆ ಸುರಿದೊಡನೆ....(ಕವನ)

 ದಟ್ಟ ಮೋಡ ಕರಗಬಹುದು ತನ್ನ ಭಾರಕೆ ಎದೆಯ ಭಾವ ಹಾಗೆ ಕರಗಿ ಬರಲು ಸಾಧ್ಯವೆ? ಮೋಡ ಕರಗಿ ನೀರ ರೂಪವಷ್ಟೆ ಪಡೆವದು ಭಾವದೊಡಲಲಿರುವ ಬಣ್ಣ ಹಲವು ಬಗೆಯದು ಮನದ ಭಿತ್ತಿಯಲ್ಲಿ ಬಾವ ಮೆತ್ತಿದಾಗಲೆಲ್ಲವೂ ಮೂಡಿಬರುವ ಚಿತ್ತಾರಗಳೆಷ್ಟೋ ಮುಖದವು. ಮಳೆ ನೀರಿನ ಪರಮಾಣಕೆ ಅಳತೆಗೋಲಿದೆ ಪರಿಣಾಮವು ಕಣ್ಣೆದುರಿನ ಸಾಕ್ಷಿಯಾಗಿದೆ ಭಾವನೆಗಳು ಧಾರೆಯಾಗಿ ಸುರಿದುಹರಿದರೆ ಅಳೆಯಲು ಇರಲಾರೆ ನಾನು ಕೊಚ್ಚಿಹೋಗದೆ! ಮಳೆಸುರಿಯಲು ಯಾರ ಹಂಗೂ ಬೇಡ ಎಂದಿಗೂ ಭಾವನೆಯೋ ಸ್ಪುರಿಸದೆಂದು ತಂತು ಮೀಟದೆ ಮಳೆಯೇ ತಂತು ಮೀಟಿದರೆ ಏನು ಮಾಡುವೆ!? ಬೆಚ್ಚತನುವಿನೊದ್ದೆಮನದ ಕೊಳದಿ ಈಜುವೆ..! (೧೬/೦೬/೨೦೨೫)

ದೀಪ ಬೆಳಗಿತು (ಕಥೆ)

           ಸಾಯಂಕಾಲದ ಸಮಯ. ಬೆಂಕಿ ಕಡ್ಡಿಯಲ್ಲಿ ಅತ್ತಿತ್ತ ಓಲಾಡುತ್ತಿದ್ದ ಕುಡಿ ಪಟಕ್ಕನೆ ದೀಪದ ಬತ್ತಿಗೆ ತಗುಲಿ ಒಮ್ಮೆಲೆ ಮತ್ತಷ್ಟು ದೊಡ್ಡದಾಗಿ ಪ್ರಜ್ವಲಿಸತೊಡಗಿತು. ಬೆಂಕಿ ಕಡ್ಡಿಯನ್ನು ನಂದ...

'ಹಲೋ.. ನಾನು ಮ್ಯಾನೇಜರ್.... ' (ಕಥೆ)

ಸೂರ್ಯನ  ಕಿರಣಗಳ  ಝಳ  ತೀವ್ರತೆಯನ್ನು  ಪಡೆಯುತ್ತಿತ್ತು. ಕಾರು,  ಬಸ್ಸು,  ಲಾರಿ,  ಬೈಕು   ಅದು ಇದು  ಅಂತ  ವಾಹನಗಳೆಲ್ಲ  ಕೀ ಕೀ... ಪೊಂ ಪೊಂ.... ಫೆ  ಫೆ  ಹೀಗೆ  ಬೇರೆ  ಬೇರೆ  ರೀತಿಯಲ್ಲಿ  ಕಿರುಚುತ್ತಾ  ಅ...