ಪೋಸ್ಟ್‌ಗಳು

ಆಗಸ್ಟ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸವೆದ ಕಲ್ಲಿನ ಹಿಂದೆ (ಕಥೆ)

ಇಮೇಜ್
     ವೀರಗಲ್ಲು ಸಾ ಗರದಿಂದ ರೈಲ್ವೇ ಹಳಿಯ ಮೇಲೆಯೇ ತಾಳಗುಪ್ಪ ಕಡೆಗೆ   ಸುಮಾರು 8 ಕಿ ಮಿ ನಡೆದರೆ ನಿಮಗೆ ಸಿಗುವ  ರೈಲ್ವೆ ನಿಲ್ದಾಣದಲ್ಲಿ 'ಕಾನಲೆ' ಎಂದು ದೊಡ್ಡ ಫಲಕದಲ್ಲಿ ಬರೆದಿರುವುದು ಗೋಚರಿಸುತ್ತದೆ. ಅದರರ್ಥ ನೀವೀಗ ಕಾಣುತ್ತಿರುವುದು ಕಾನಲೆ ಊರಿನ ರೈಲ್ವೇ ನಿಲ್ದಾಣ. ಬ್ರಿಟೀಷರ ಕಾಲದ ಈ ರೈಲು ಮಾರ್ಗ ಈಗ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಿದೆ. ಹಿಂದೆ  ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು ಮತ್ತು ರೈಲು ನಿಲುಗಡೆಯೂ ಇತ್ತು. ಈಗ ಇಲ್ಲಿ ಹೊಸ ರೈಲು ನಿಲ್ದಾಣ ಮಾಡಲಾಗಿದೆ ಹಾಗೂ ಈ ನಿಲ್ದಾಣದಲ್ಲಿ ಯಾವುದೇ ರೈಲನ್ನೂ ನಿಲ್ಲಿಸುತ್ತಿಲ್ಲ! ಆ ನಿಲ್ದಾಣದಲ್ಲಿ  ನೀವು ಸಾಗಿ ಬಂದ  ಕಡೆಯಿಂದಲೇ ಬಲಕ್ಕೆ ನೋಡಿದರೆ ಸಾಗರದಿಂದ ಬಂದಂತಹ ಡಾಂಬರು ಹಾದಿಯೊಂದು ರೈಲ್ವೆ ಮಾರ್ಗವನ್ನೇ ದಾಟಿ ಮುಂದುವರೆದಿರುವುದು ಕಾಣುತ್ತದೆ. ಅದು ಮಂಡಗಳಲೆ, ಕಾಗೋಡು, ಮಾಸೂರಿನ ಮೂಲಕ ಸೊರಬ ಸೇರುತ್ತದೆ. ಅಲ್ಲದೆ ಆ ಹಾದಿಯ ಬಲಕ್ಕೆ  ತೆರೆದುಕೊಳ್ಳುವ ದಾರಿಯಲ್ಲಿ ಮುಂದುವರೆದರೆ ನಿಮಗೆ ಸಿಗುವುದು ವರದಾನದಿ. ಅದರಾಚೆ ಇರುವ ಅದರಂತೆ ಊರನ್ನು ದಾಟಿ ನಾಲ್ಕಾರು ಕಿಲೋಮಿಟರುಗಳಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಊರಿಗೆ ನೀವು ತಲುಪುತ್ತೀರಿ.  ನಿಲ್ದಾಣದಿಂದ ಎಡಕ್ಕೆ ನೋಡಿದರೆ  ಹಸಿರು ಹುಲ್ಲಿನ ಚಿಕ್ಕ ಬಯಲು ಹಾಗೂ ನಡುವಲ್ಲಿಯೇ ಇರುವ, ಸಾಗರದಿಂದ ಬಂದ ಡಾಂಬರು ರಸ್ತೆ ಹಾಗೂ ಡಾಂಬರು ರಸ್ತೆಯ ಬಲಕ್ಕೆ ತಿರುಗಿ ಕಾನಲೆ ಊರೊಳಕ್ಕೆ ಸಾಗುವ ಮಣ್ಣು

ಸಾಗಿ ಬಂದ ತೀರ ( ಕಥೆ )

ಇಮೇಜ್
          ಶ ರತ್ಚಂದ್ರ  ಕಾಫಿ ಹೀರುತ್ತಾ ಕುರ್ಚಿಯಲ್ಲಿ  ಕುಳಿತಿದ್ದ ಬಲಗೈಯಲ್ಲಿ ಯಾವುದೋ ಪುಸ್ತಕ  ಇತ್ತು. ತುಂಬಾ ಆಳವಾಗಿ ಅದರಲ್ಲಿಯೇ ಮುಳುಗಿದ್ದ. "ಮಾಮ...ಮಾಮ...ಇಲ್ನೋಡು" ಕುಣಿ ಕುಣಿಯುತ್ತಾ ಬಂದ ಶಾಶ್ವತಿ ಶರತ್ಚಂದ್ರನ ತೊಡೆಯಮೇಲೆಯೇ ಕುಳಿತಳು. " ಇದೇನು ಪುಟ್ಟಿ, ಇದೆಲ್ಲಿಂದ ತಂದೆ ಲೋಟನ? ಅಮ್ಮ  ಏನಾದ್ರೂ ತರೊದಕ್ಕೆ ಲೋಟ ಕೊಟ್ಟು ಕಳಿಸಿದ್ರ" ಶರತ್ಚಂದ್ರ ಸಹಜವಾಗಿಯೇ ಕೇಳಿದ ಆಕೆಯನ್ನು ದಿಟ್ಟಿಸುತ್ತ. " ಇಲ್ಲ ಮಾಮ, ಇದು ನಂಗೆ ಬಹುಮಾನ ಬಂದ ಲೋಟ. ಇವತ್ತು ನಾನು ಹಾಡಲ್ಲಿ ಫಸ್ಟ್ ಬಂದೆ. ಅದಕ್ಕೆ ಕೊಟ್ಟಿದ್ದು" ಹೆಮ್ಮೆಯಿಂದ ತೋರಿಸುತ್ತ ಹೇಳಿದಳು. "ಹೌದ...! ಜಾಣೆ ನೀನು. ಯಾವಾಗಲೂ ಹೀಗೆ ಬಹುಮಾನ ತಗೋಳತಾನೇ ಇರಬೇಕು ನೀನು" ಆಕೆಯನ್ನು ಮುದ್ದಿಸುತ್ತ ಹೇಳಿದ. ಬಹುಮಾನವಾಗಿ ಬಂದ ಚಿಕ್ಕ ಲೋಟಕ್ಕೆ ಅವಳು ಪಡುತ್ತಿರುವ ಖುಷಿ ನೋಡಿ ಶರತ್ಚಂದ್ರನಿಗೂ ಖುಷಿಯಾಯಿತು. " ಹೋಗು, ಅಜ್ಜಿಗೆ ತೋರಿಸು ಹೋಗು"  ಎಂದು ಶರತ್ಚಂದ್ರ ಹೇಳುವುದರೊಳಗಾಗಿ ಶಾಶ್ವತಿ ಕೆಳಗಿಳಿದು ಅಡುಗೆಮನೆಯ ಕಡೆಗೆ ಓಡಿದಳು " ಅಜ್ಜೀ" ಎಂದು ಕೂಗುತ್ತ.         ಶರತ್ಚಂದ್ರ ಆಕೆಯ ಕಡೆಗೇ ನೋಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ  " ಎಷ್ಟು ಚುರುಕಿನ ಹುಡುಗಿ. ಸಾವಿರ ಮಾತು ಪಟಪಟ ಆಡ್ತಾನೇ ಇರ್ತಾಳೆ. ಹಾಡು ಶೇಡಿ ಅಂತೇನೇ ಇದ್ರೂ 'ನಾನು ನಾನು' ಅಂತ ಓಡಿ ಬರ್ತಾಳೆ. ಶಾ

ಬೇಡಿಕೊಳ್ಳುವುದ ಬೇಡಿಕೊಳ್ಳದೆ(ಕಥೆ)

ಇಮೇಜ್
           "ಶ್ರೀನಿವಾಸ....ಶ್ರೀನಿವಾಸ. ...." ಕ್ಷೀಣ ಸ್ವರದಲ್ಲಿ ಕೂಗಿದಳು ಸಾವಿತ್ರಮ್ಮ. ಕೆಲವು ಕ್ಷಣಗಳ ನಂತರ ಮತ್ತದೇ ಕೂಗು "ಶ್ರೀನಿವಾಸ..... ಶ್ರೀನಿವಾಸ". ಅದು ಅವಳ ಅನಿವಾರ್ಯವೂ ಆಗಿತ್ತು. ತನ್ನೆಲ್ಲ ಅಗತ್ಯತೆಗಳಿಗೆ ಇದ್ದೊಬ್ಬ ಮಗನನ್ನೇ ಕೂಗಬೇಕಿತ್ತು. ಸಾವಿತ್ರಮ್ಮ ಮಲಗಿದ್ದ ಕೊಣೆಯಿಂದ ಕೂಗಳತೆ ದೂರದಲ್ಲಿಯೆ ಇದ್ದ ಕೊಟ್ಟಿಗೆಯ ಕೆಲಸವನ್ನು ಮುಗಿಸುತ್ತಿದ್ದ ಶ್ರೀನಿವಾಸನಿಗೆ ತಾಯಿಯ ಕ್ಷೀಣವಾದ ಕೂಗು ಮೊದಲಿಗೆ ಕೇಳಿಸಲಿಲ್ಲ. ಎರಡನೇ ಬಾರಿಗೆ ಕೇಳಿಸಿತು. ಮಾಡುತ್ತಿದ್ದ ಕೊಟ್ಟಿಗೆ ಕೆಲಸವನ್ನು ತಕ್ಷಣ ಬಿಟ್ಟುಬರಲಾಗದೆ ಅಲ್ಲಿಂದಲೇ " ಸುಷ್ಮಾ. .. ಅಜ್ಜಿ ಯಾಕೋ ಕೂಗುತ್ತಿದ್ದಾರೆ ನೋಡು" ಎಂದು ಕೂಗಿಕೊಂಡ.  ಜಗುಲಿಯ ಪಕ್ಕದಲ್ಲಿನ ತನ್ನ ರೂಮಿನಲ್ಲಿ ಪರಿಕ್ಷೆಗಾಗಿ ಓದಿಕೊಳ್ಳುತ್ತಿದ್ದ ಸುಷ್ಮಾ ಅಲ್ಲಿಂದಲೇ " ಹಾ... ನೋಡ್ತೇನೇ ಅಪ್ಪಾ" ಎಂದು ಕೂಗಿದವಳೇ ನೇರ ಅಜ್ಜಿಯ ರೂಮಿಗೆ ಬಂದಳು. ರೂಮಿಗೆ ಪ್ರವೇಶ ಮಾಡುತ್ತಲೇ ಮೂಗುಮುಚ್ಚಿಕೊಳ್ಳುವಂತಾಯ್ತು. ಸಾವಿತ್ರಮ್ಮನ ಮುಖದಲ್ಲಿದ್ದ ಅಸಹನೆ ನೋಡಿದಾಗ ಅವಳಿಗೆ ವಿಷಯ ಅರ್ಥವಾಯಿತು. "ಅಮ್ಮ.... ಅಜ್ಜಿಯನ್ನು ನೋಡು ಬಾ. ಗಬ್ಬು ವಾಸನೆ ತಡೀಲಿಕ್ಕಾಗ್ತಾ ಇಲ್ಲ" ಎಂದು ದೊಡ್ಡ ದನಿಯಲ್ಲಿ ಹೇಳಿ, ಮುಂದಿನ ಜವಾಬ್ದಾರಿಯನ್ನೆಲ್ಲ  ಅಮ್ಮನಿಗೆ ವರ್ಗಾಯಿಸಿ ಒಂದು ಕ್ಷಣವೂ ನಿಲ್ಲದೆ ತನ್ನ ಕೋಣೆಗೆ ಓಡಿದಳು.             ಅಡುಗೆ