ಪೋಸ್ಟ್‌ಗಳು

Kanale ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸವೆದ ಕಲ್ಲಿನ ಹಿಂದೆ (ಕಥೆ)

ಇಮೇಜ್
     ವೀರಗಲ್ಲು ಸಾ ಗರದಿಂದ ರೈಲ್ವೇ ಹಳಿಯ ಮೇಲೆಯೇ ತಾಳಗುಪ್ಪ ಕಡೆಗೆ   ಸುಮಾರು 8 ಕಿ ಮಿ ನಡೆದರೆ ನಿಮಗೆ ಸಿಗುವ  ರೈಲ್ವೆ ನಿಲ್ದಾಣದಲ್ಲಿ 'ಕಾನಲೆ' ಎಂದು ದೊಡ್ಡ ಫಲಕದಲ್ಲಿ ಬರೆದಿರುವುದು ಗೋಚರಿಸುತ್ತದೆ. ಅದರರ್ಥ ನೀವೀಗ ಕಾಣುತ್ತಿರುವುದು ಕಾನಲೆ ಊರಿನ ರೈಲ್ವೇ ನಿಲ್ದಾಣ. ಬ್ರಿಟೀಷರ ಕಾಲದ ಈ ರೈಲು ಮಾರ್ಗ ಈಗ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಿದೆ. ಹಿಂದೆ  ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು ಮತ್ತು ರೈಲು ನಿಲುಗಡೆಯೂ ಇತ್ತು. ಈಗ ಇಲ್ಲಿ ಹೊಸ ರೈಲು ನಿಲ್ದಾಣ ಮಾಡಲಾಗಿದೆ ಹಾಗೂ ಈ ನಿಲ್ದಾಣದಲ್ಲಿ ಯಾವುದೇ ರೈಲನ್ನೂ ನಿಲ್ಲಿಸುತ್ತಿಲ್ಲ! ಆ ನಿಲ್ದಾಣದಲ್ಲಿ  ನೀವು ಸಾಗಿ ಬಂದ  ಕಡೆಯಿಂದಲೇ ಬಲಕ್ಕೆ ನೋಡಿದರೆ ಸಾಗರದಿಂದ ಬಂದಂತಹ ಡಾಂಬರು ಹಾದಿಯೊಂದು ರೈಲ್ವೆ ಮಾರ್ಗವನ್ನೇ ದಾಟಿ ಮುಂದುವರೆದಿರುವುದು ಕಾಣುತ್ತದೆ. ಅದು ಮಂಡಗಳಲೆ, ಕಾಗೋಡು, ಮಾಸೂರಿನ ಮೂಲಕ ಸೊರಬ ಸೇರುತ್ತದೆ. ಅಲ್ಲದೆ ಆ ಹಾದಿಯ ಬಲಕ್ಕೆ  ತೆರೆದುಕೊಳ್ಳುವ ದಾರಿಯಲ್ಲಿ ಮುಂದುವರೆದರೆ ನಿಮಗೆ ಸಿಗುವುದು ವರದಾನದಿ. ಅದರಾಚೆ ಇರುವ ಅದರಂತೆ ಊರನ್ನು ದಾಟಿ ನಾಲ್ಕಾರು ಕಿಲೋಮಿಟರುಗಳಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಊರಿಗೆ ನೀವು ತಲುಪುತ್ತೀರಿ.  ನಿಲ್ದಾಣದಿಂದ ಎಡಕ್ಕೆ ನೋಡಿದರೆ  ಹಸಿರು ಹುಲ್ಲಿನ ಚಿಕ್ಕ ಬಯಲು ಹಾಗೂ ನಡುವಲ್ಲಿಯೇ ಇರುವ, ಸಾಗರದಿಂದ ಬಂದ ಡಾಂಬರು ರಸ್ತೆ ಹಾಗೂ ಡಾಂಬರು ರಸ್ತೆಯ ಬಲಕ್ಕೆ ತಿರುಗಿ ಕಾನಲೆ ಊರೊಳಕ್ಕೆ ಸಾಗುವ ಮಣ್ಣು