ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಶಾಸ್ತ್ರೀಜಿ. ...

ಇಮೇಜ್
ವಾಮನ ಶರೀರದಲಿ ಅಪರಿಮಿತ ಧೀರ ಭಾರತದ ವರಪುತ್ರ ಲಾಲ ಬಹದ್ದೂರ. ಸರಳತೆಯೆ ಉಸಿರಾಗಿ, ಸಜ್ಜನಿಕೆ ಹೆಸರಾಗಿ ಜನರ ಮನಮಂದಿರದಿ ನೆಲೆ ನಿಂತೆ ನೀನು ವೈಭೋಗವಿಲ್ಲದಿಹ ತ್ಯಾಗ ಜೀವನದಲ್ಲಿ ವೈಭವದಿ ಮೆರೆದಂತ ನಿಜಯೋಗಿ ನೀನು ಪೀಚು ಪೀಚಾಗಿರುವ ನೀನೆಂತ ವ್ಯಕ್ತಿ? ಮೈತಳೆದು ಬಂದಿರುವ ನಿಜ ದೇಶ ಭಕ್ತಿ! ಹೊರಗಣ್ಣಿನಲಿ ನೀನು ತುಂಬ ನಿಃಶಕ್ತ ಅಂತರಂಗದಲೆಂಥ ಅಪರಿಮಿತ ಶಕ್ತ! ನಿನ್ನ ಕಾಯವ ನೋಡಿ,ಮನದಿ ಕುಹಕವ ಮಾಡಿ ನಿನ್ನ ವಿನಯವ ನೋಡಿ, ಆಡಿಕೊಂಡರು ಕೂಡಿ ಮುಟ್ಟಿಕೊಳಬೇಕಾಯ್ತವರು ತಮ್ಮನ್ನೆ ತಾವು ಅರಿತುಕೊಂಡರು ಕೊನೆಗೆ ಮಂದಮತಿಗಳಾಗಿಹೆವು. ದೌರ್ಭಾಗ್ಯ ನಮ್ಮಯ ಹೆಗಲೇರಿ ಬಂತು ಆ ದಿನವೆ ತಾಷ್ಕೆಂಟಿನಲಿ ಸಹಿಯು ಬಿತ್ತು ಏನಾಯ್ತು? ಯಾಕಾಯ್ತು? ಗೊತ್ತಾಗದಂತೆ ಆ ರಾತ್ರಿ ನೀ ತೊರೆದೆ ಈ ಜಗದ ಸಂತೆ ನನ್ನ ಸ್ಮರಣೆಯ ಪುಟದಿ ಚಿರ ನೆನಪು ನೀನು ಉಸಿರಿರುವವರೆಗೆ ನಾ ನಿನ ಮರೆವೆನೇನು? ದೀಪದಂತಿಹೆ ನೀನು ಭರತಮಾತೆಯ ಗುಡಿಗೆ ಶಿರ ಬಾಗಿ ನಮಿಸುವೆನು ಶಾಸ್ತ್ರಿ ನಿನ್ನಡಿಗೆ.

'ಅಗ್ನಿ'ಜ್ವಾಲೆ ಅನಂತದೆಡೆಗೆ

ಇಮೇಜ್
ಕ್ಷಣ ಕ್ಷಣವು ಉರಿದುದುರಿದು ಪ್ರಖರತೆಯ ಸಿರಿ ಬಿರಿದು ಧಗಧಗಿಸಿ ಉರಿಯುತ್ತಲುರಿಯುತ್ತಲೆ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ ! ರಾಷ್ಟ್ರ ಕೀರ್ತಿಯ ವಿಶ್ವದಂಚಂಚಿಗೆ ಹರಡಿ ರಾಷ್ಟ್ರ ರಾಷ್ಟ್ರಗಳಿಗೆ  ತನ್ನ ನೆಲದ ಬಲವನು ತೋರಿ ರಾಷ್ಟ್ರದೇಳಿಗೆಯ ಮಂತ್ರ ಪಠಿಸುತ್ತ ಜಪಿಸುತ್ತ ಬಿಸಿ ಕಾವು ಉಳಿಸಿ ಸಾಗಿ ಹೋಯಿತು ಅಗ್ನಿ ಜ್ವಾಲೆ ಅನಂತದೆಡೆಗೆ ! ತೋರುವುದು ಯಾವುದೂ ತಡೆಗೋಡೆಯಲ್ಲ ಪರಿಶ್ರಮ ಸೀಳುವುದು ತಡೆಗೋಡೆಯೊಡಲ ಒಳಿತಿನ ಹಂಬಲವೆ ಜೀವನದ ಕೀರ್ತಿ ಎಲ್ಲರಲಿ ಒಲವೇ ಜೀವನಕೆ ಸ್ಪೂರ್ತಿ ಎಂಬುದನು ತಿಳಿಸಿ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !                  ಕಾಶ್ಮೀರದಂಚಿಂದ ಕನ್ಯಾ ಕುಮಾರಿ ಹಂಬಲಿಸಿ ಹಂಬಲಿಸಿ ಕಂಬನಿಯ ಬೀರಿ ಸೂತಕದ ಯಾತನೆಯ ಪಡುವಂತೆ ಮಾಡಿ ನುಡಿ ನುಡಿವ ಮುನ್ನವೇ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !

ದುರ್ಗಾಸ್ತಮಾನ:ಅಸ್ತಮಿಸಿದ ದುರ್ಗದಲ್ಲಿ ಉದಯಿಸಿದ ಕೃತಿಸೂರ್ಯ

ಇಮೇಜ್
             ಇತಿಹಾಸವೇ ಹಾಗೆ; ಸತ್ಯದ ಸುತ್ತಲೂ ಹಲವಾರು ಅಂತೆ ಕಂತೆಗಳು, ಉದ್ದೇಶ ಪೂರ್ವಕ ತಿರುಚುಗಳು, ತಪ್ಪಾಗಿ ಅರ್ಥೈಸಿ ಮಾಡಿದ ಅನರ್ಥಗಳು ಇವೆಲ್ಲ ಗುರುತಿಸಲು ಆಗದಷ್ಟು ಕರಗಿ ಒಂದಾಗಿ ಇತಿಹಾಸವೊಂದು ರಚನೆಯಾಗಿರುತ್ತದೆ. ಇತಿಹಾಸದ ಅಧ್ಯನಯನದ ಹೆಸರಿನಲ್ಲಿ ಇದನ್ನೇ ನಾವು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಿರುತ್ತೇವೆ. ಆ ನಂತರ ಹೀಗೆಲ್ಲ ಒಂದುಗೂಡಿದ ಅಂಶಗಳನ್ನು ಪ್ರತ್ಯೇಕಿಸುತ್ತಾ, ಅಧ್ಯಯನ ನಡೆಸುತ್ತಾ ವಾದ ವಿವಾದ ಮಾಡುತ್ತ,ಚರ್ಚೆ ನಡೆಸುತ್ತ ವಿದ್ವಾಂಸರೆನಿಸಿಕೂಂಡವರು ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತಲೇ ಇರುತ್ತಾರೆ. ಐತಿಹಾಸಿಕ ಘಟನೆಗಳಿಗೆ ಕಾರಣರಾದವರಷ್ಟೆ ನಿಜವಾದದನ್ನು ಕಣ್ಣೆದುರಿಗಿರಿಸಬಲ್ಲರು. ಆದರೆ ಅವರೇ ಕಣ್ಣೆದುರಿಗಿಲ್ಲವೆಂದಾದಾಗ ಅವರೊಡನೆ ವಾಸ್ತವವೂ ಮರೆಯಾಗಿ ಕಲ್ಪನೆಗಳನ್ನೇ ವಾಸ್ತವವಾಗಿಸುವ ನಿರಂತರ ಪ್ರಯತ್ನಗಳು ಹೊಟ್ಟೆಪಾಡಾಗಿ ನಡೆಯುವುದು ತಪ್ಪಿಸಲು ಸಾಧ್ಯವಿಲ್ಲವೇನೋ.              ವಿಷಯ ಹೀಗಿದ್ದರೂ ಕೆಲವರು  ಇತಿಹಾಸದ ಯಾವುದೋ ಘಟನೆಯಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಹೃದಯದಲ್ಲಿ ಧರಿಸಿ, ಇರುವ ದಾಖಲೆ ಸಾಕ್ಷಿಗಳನ್ನು ಪರಿಶೀಲಿಸಿ ನಿಜವನ್ನು ಪ್ರಕಟಪಡಿಸಲು ಹೆಣಗುತ್ತಿರುತ್ತಾರೆ. ಹೀಗೆ ಸತ್ಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಪಡಿಸುವುದರ ಹಿಂದೆ ಆಳವಾದ ಪ್ರಯತ್ನ ಬೇಕಿರುವಾಗ , ಇತಿಹಾಸದ ಮಗ್ಗುಲೊಂದನ್ನು ಕಾದಂಬರಿಯ ರೂಪದಲ್ಲಿ ತರುವುದು ಅದಿನ್ನೆಷ್ಟು ಕಠಿಣ!....