ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಳುಗಡೆಯಾಗದ ನೆನಪುಗಳು...

ಇಮೇಜ್
        ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಆ ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು . ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾವು, ಬಾಳೆಕಾಯಿಗಳದ್ದೇ ಕಾರುಬ