ಪೋಸ್ಟ್‌ಗಳು

ಜೂನ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೃತಘ್ನನ ಕೃತಜ್ಞತೆ.

ಇಮೇಜ್
          ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ  ಸುಸ್ತಾಗಿ ಮರಕ್ಕೆ  ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್  ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ  ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು.  ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !   ಸರಿಯಾಗಿ  ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು‌. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರತಿನಿತ್ಯದ ಪಾಡಾಗಿತ್ತು. ಮೊದಲು ಒಂದು ಸೈಕಲ್ ಇದ್ದರೂ, ಅದು ನನಗೆ ಗಿಡ್ಡವಾಗಿದ್ದರಿಂದ ಬೆನ್ನು

ಏಕಮೇವ ಕೋರಿಕೆ.

ಇಮೇಜ್
ಸುಖ ಬರುವುದು, ನಲಿವಿರುವುದು ಸಂತೋಷತಾನೆ...! ಅದರ ಜೊತೆಜೊತೆಯೇ ಕಷ್ಟವೂ ಬರಲಿ, ನೋವೂ ಬರಲಿ ಬರಬೇಕಾದುದೆಲ್ಲವೂ ಬಂದೇ ಬರಲಿ ಅದು ಸಹಜವೇನೇ...! ಆದರೆ ನೀ ಎನ್ನ ತೊರೆವ ಕ್ಷಣ, ಕೈ ಬಿಟ್ಟು ನಡೆವ ಕ್ಷಣ, ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ.... ಶ್ರೀಗುರುವೇ... ಅದು ಮಾತ್ರ ಎಂದಿಗೂ ಬಾರದಿರಲಿ! ಆ ದಿನವ ಈ ಬಾಳು ಕಾಣದಿರಲಿ.!!