ದೀಪ ಬೆಳಗಿತು (ಕಥೆ)
ಸಾಯಂಕಾಲದ ಸಮಯ. ಬೆಂಕಿ ಕಡ್ಡಿಯಲ್ಲಿ ಅತ್ತಿತ್ತ ಓಲಾಡುತ್ತಿದ್ದ ಕುಡಿ ಪಟಕ್ಕನೆ ದೀಪದ ಬತ್ತಿಗೆ ತಗುಲಿ ಒಮ್ಮೆಲೆ ಮತ್ತಷ್ಟು ದೊಡ್ಡದಾಗಿ ಪ್ರಜ್ವಲಿಸತೊಡಗಿತು. ಬೆಂಕಿ ಕಡ್ಡಿಯನ್ನು ನಂದಿಸಿ ಹೊರಗೆ ಎಸೆದು, ಅಡುಗೆಮನೆಗೆ ಹೋಗಿ ಚಿಕ್ಕ ಹಾಲಿನ ಲೋಟದೊಂದಿಗೆ ವಾಪಾಸಾದಳು ಅಂಬುಜಾ. ಅದನ್ನು ದೇವರ ಎದುರು ಇಟ್ಟು, ಕೈ ಮುಗಿದು ಪ್ರದಕ್ಷಿಣೆ ಮಾಡಿ ಶಿರ ಬಾಗಿ ನಮಸ್ಕಾರ ಮಾಡಿದಳು. ಮನದ ಯೋಚನೆ ಏನಿತ್ತೋ ಅದು ದೇವರ ಎದುರಲ್ಲಿ ಪ್ರಾರ್ಥನೆಯಾಯಿತು. "ಯಲ್ ಹೋಗ್ಬಿಡಚೇನ...." ತನ್ನಷ್ಟಕ್ಕೆ ತಾನೇ ಹೇಳುತ್ತಾ ಚಪ್ಪಲಿ ಬಿಚ್ಚಿ ಪಕ್ಕದಲ್ಲಿಟ್ಟು ಚಿಂತಿತನಾಗಿ ಮನೆ ಒಳಗೆ ಬಂದ ಕೇಶವ. ಅವನ ಈ ಗೊಣಗು ಕೇಳಿಸಿಕೊಂಡ ಅಂಬುಜಾ ದೇವರ ಒಳದಿಂದ ಅಡುಗೆ ಮನೆಗೆ ಬರುತ್ತಾ ಹೇಳಿದಳು " ಬಿಡದು ಬ್ಯಾಡ ಹೇಳಿ ಸಾವ್ರ ಸರ್ತಿ ಹೇಳ್ದಿ. ನಿಂಗೌಕೆ ಯಾವಾಗ್ಲೂ ನಿಂಗಳದ್ದೇಯಾ. ಅಲ್ಲ, ಅಷ್ಟು ಗೊತ್ತಾಗ್ತಲ್ಯಾ ಹಂಗರೆ? ಗಬ್ಬದ ದನ, ತಿಂಗ್ಳ್ ತುಂಬತಾ ಇದ್ದು. ಕೆಚ್ಚಲು ಬಿಡ್ತಾ ಇದ್ದು ಅಂತ ನಿಂಗನೇ ಹೇಳಿದ್ದಿ. ಅಂತಾದ್ರಲ್ಲಿ ಇವತ್ತು ಬಿಟ್ಟಿದ್ರನ ಹಂಗರೆ...? ಇನ್ ಯಂತ ಹೇಳಕ್ಕು" "ಯಂತಾಗ್ತಲ್ಲೆ ಸುಮ್ನಿರೇ.... ಈಗೇನ್ ಬಾಳ ಹೊತ್ತಾಗಲ್ಲೆ. ಬತ್ತಿಕ್ಕು, ನೋಡನ" ಹೆಂಡತಿಯ ಮಾತಿಗೆ ಒಂದು ಕೌಂಟರ್ ಕೊಟ್ಟಿದ್ದು ಹೌದಾದರೂ ಅವನ ತಲೆಯಲ್ಲೂ ಚಿಂತೆಯು ಹರಳುಗಟ್ಟಿತ್ತು. ಅಷ್ಟು ಹೊತ್ತಿಗೆ ಬಿಸಿ ಕಾಫಿ