ಧನ್ಯ ಜೀವನಕ್ಕೆ ಬರೆದ ಮುನ್ನುಡಿ
ವರದಹಳ್ಳಿಯ ಶ್ರೀಧರ ಸ್ವಾಮಿಗಳು ಅಪರಿಚಿತರೇನಲ್ಲ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರು. ದೇಶದಾದ್ಯಂತ ಸಂಚರಿಸಿ ಜನರಲ್ಲಿ ಧರ್ಮಜಾಗೃತಿ ಮಾಡಿದವರು, ಅಧ್ಯಾತ್ಮ ಅಭೀಪ್ಸೆಯನ್ನು ಜಾಗೃತಗೊಳಿಸಿದವರು. 20ನೇ ಶತಮಾನದಲ್ಲಿ ಭಾರತ ಕಂಡ ಶ್ರೇಷ್ಠ ಸಂತರಲ್ಲಿ ಇವರೂ ಒಬ್ಬರು. ಮಹಾರಾಷ್ಟ್ರದ ಸಜ್ಜನಗಡದಲ್ಲಿ ರಾಷ್ಟ್ರಗುರು ಎಂದೇ ಖ್ಯಾತರಾದ, ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದ ಶ್ರೀ ಸಮರ್ಥ ರಾಮದಾಸರನ್ನೇ ತಮ್ಮ ಗುರುಗಳೆಂದು ಸ್ವೀಕರಿಸಿ, ಗುರುಸೇವೆ ಮಾಡಿ ಪರಮಾತ್ಮ ಸಾಕ್ಷಾತ್ಕಾರ ಮಾಡಿಕೊಂಡವರು ಶ್ರೀಧರ ಸ್ವಾಮಿಗಳು. ಅವರು ಅಲ್ಲಿ ಸಾಧಕರಾಗಿ ಸಲ್ಲಿಸಿದ ಸೇವೆಯ ಕಿರು ಪರಿಚಯ ಇಲ್ಲಿದೆ ಶ್ರೀಧರ ಸ್ವಾಮಿಗಳು ಸಾಧಕರಾಗಿ ಸಜ್ಜನಗಡದಲ್ಲಿದ್ದಾಗ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ರಾತ್ರಿ ಹನ್ನೊಂದು ಗಂಟೆಯವರೆಗೆ ಅವಿಶ್ರಾಂತ ಗುರುಸೇವೆಯಲ್ಲಿಯೇ ಮುಳುಗಿರುತ್ತಿದ್ದರು. ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪಹೊತ್ತು ಆತ್ಮಚಿಂತನೆ ಮಾಡಿ ಶ್ರೀರಾಮ ಸಮರ್ಥರನ್ನು ಗುರುಭಾವನೆಯಿಂದ ಅಲ್ಲಿಯೇ ಅಭಿನಮಿಸುತ್ತಿದ್ದರು. ಆನಂತರ ಶ್ರೀರಾಮದೇವರ ಗರ್ಭಗುಡಿಯಮುಂದಿರುವ ಸಭಾಮಂಟಪವನ್ನು ಮತ್ತು ದೇವಸ್ಥಾನದ ಎದುರು ಗುಡಿಸಿ, ಗೋಮಯ ನೀರು ಚಿಮುಕಿಸಿ ಸ್ನಾನಕ್ಕೆ ಹೋಗುತ್ತಿದ್ದರು. ಹಾಗೆ ದೇಹಧರ್ಮಗಳನ್ನೆಲ್ಲಾ ಮುಗಿಸಿ ಸ್ನಾನಮಾಡಿ ಬರಬೇಕಾದರೆ ನಾಲ್ಕುಘಂಟೆಯಾಗುತ್ತಿತ್ತು. ಬಂದವರ