ಇಬ್ಬಗೆಯ ನೀತಿ ಏಕೆ?

            ಇತ್ತೀಚೆಗೆ ತುಂಬಾ ಚಚಿ೯ತವಾಗಿರುವ ಗೋ ಹತ್ಯೆ ನಿಷೇದದ ಬಗ್ಗೆ ವಿಚಾರ ಮಾಡಿದಾಗ,ನಿಷೆದವನ್ನು ವಿರೋಧಿಸುವವರ ನಿಲುವಿನ ಬಗ್ಗೆ ಕೆಲವು ಪ್ರಶ್ನೆಗಳು ಮೂಡುತ್ತವೆ. ನೀವು ಗೋ ಹತ್ಯೆಯನ್ನು ಸಮರ್ಥಿಸುತ್ತೀರಿ ಎಂದಾದಲ್ಲಿ ಇತ್ತೀಚಿಗೆ ಕುಷ್ಟಗಿಯಲ್ಲಿ ನಡೆದ ಪ್ರಾಣಿ ಬಲಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಪ್ರಾಣಿ ಬಲಿಯನ್ನು ವಿರೋಧಿಸುವಿರಿ ಎಂದಾದರೆ ,ಗೋ ಹತ್ಯೆಯನ್ನು ಹೇಗೆ ತಾನೇ ಸಮರ್ಥಿಸುತ್ತೀರಿ. ಸ್ವಯಂ ಘೋಷಿತ ಮಹನೀಯರೆಲ್ಲರೂ ಒಂದೇ ಮನಸ್ತಿತಿಯನ್ನು ಹೊಂದಿದ್ದಾರೆ . ಪ್ರಾಣಿ ಬಲಿಯನ್ನು ಅವ್ರು ಸುತರಾಂ ಬೆಂಬಲಿಸಲಾರರು . ಬೆಂಬಲಿಸಿದಲ್ಲಿ ಅವರು ಅಜ್ಞಾನಿ, ಅವೈಚಾರಿಕ , ಮೂಢವ್ಯಕ್ತಿ ಎಂದಾಗುತ್ತಾರೆ.ಆದರೆ ಗೋ ಹತ್ಯೆಯ ನಿಷೆಧವನ್ನು ತೀವ್ರವಾಗಿ ಖಂಡಿಸುತ್ತಾರೆ. ಇದು ಅವರನ್ನು ವೈಚಾರಿಕರನ್ನಾಗಿಯೂ, ಹೋರಾಟಗಾರರನ್ನಾಗಿಯೂ, ಜಾತ್ಯಾತೀತರನ್ನಾಗಿಯೂ ಮಾಡುತ್ತದೆ. ಒಂದೇ ರೀತಿಯ ಘಟನೆಗಳ ಮೇಲೆ ಎರಡು ವಿಭಿನ್ನ ರೀತಿಯ ಅಭಿಪ್ರಾಯಗಳು ಬರುವುದು ವ್ಯಕ್ತಿಯ ಲಜ್ಜೆಗೆಟ್ಟ ತನವನ್ನು ತೋರಿಸುತ್ತದೆ.
         ಗೋ ಹತ್ಯೆ ಮಾಡುವುದು ಆಹಾರ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎನ್ನುವುದಾದರೆ, ಬಲಿ ನೀಡುವುದು ಕೂಡ ಧಾಮಿ೯ಕ ಪದ್ದತಿಯ ದೃಷ್ಟಿಯಿಂದ ಅನಿವಾಯ೯ ಎಂದರೆ ತಪ್ಪಾಗುತ್ತದೆಯೆ? ಒಂದು ಸರಿ,ಇನ್ನೊಂದು ತಪ್ಪಾಗಲು ಹೇಗೆ ಸಾಧ್ಯ?.ತಪ್ಪೆನ್ನುವುದಾದರೆ ಎರಡೂ ತಪ್ಪು. ಸರಿ ಎಂದಾದರೆ ಎರಡೂ ಸರಿ. ಏಕೆಂದರೆ ಎರಡೂ ಘಟನೆಗಳಲ್ಲಿಯೂ ಮುಗ್ಧ ಪ್ರಾಣಿಗಳು ಹಿಂಸಾತ್ಮಕವಾಗಿ ಸಾಯುತ್ತವೆ.ಇಲ್ಲಿ ಒಂದನ್ನು ಹಿಂಸೆ ಎಂದು ಖಂಡಿಸ ಹೊರಟರೆ, ಇನ್ನೊಂದು ಕೂಡ ಹಿಂಸೆಯೇ ಆಗಿದೆ. ಗೋ ಮಾಂಸ ಆಹಾರವಾಗಿ ಅವಷ್ಯಕ ಎಂದು ಸಾಧಿಸ ಹೊರಟರೆ, ಬಲಿ ಕೊಟ್ಟ ಪ್ರಾಣಿಗಳನ್ನೂ ನಂತರ ಆಹಾರವಾಗಿಯೇ ಬಳಸಲಾಗುತ್ತದೆ. ವಿಚಾರ ಕತ್ತಿಯ ಅಲುಗಿನಷ್ಟೇ ಹರಿತವಾಗಿದೆ.
     ಗೋವು ಭಾರತೀಯರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.ಭಾರತೀಯ ಸಂಸ್ಕೃತಿಯಲ್ಲಿ ಬೆಳೆದವರು ಗೋ ಹತ್ಯೆಯನ್ನು ಸಮಥಿ೯ಸಲಾರರು . ಸಮಥಿ೯ಸುವವರು ಎಲ್ಲೋ ಬೆರಳೆಣಿಕೆಯಷ್ಟು ಇರಬಹುದು. .ನಾವು ವಿಚಾರ ಮಾಡಬೇಕಿರುವುದು ಹಿಂಸಾತ್ಮಕವಾಗಿ ಕೊಲ್ಲುವುದನ್ನು ಹೇಗೆ ನಿಲ್ಲಿಸಬೇಕೆಂದು. ಈ ವಿಚಾರದಲ್ಲಿ ನಮಗೆ ಅಗತ್ಯವಾಗಿರುವುದು ಸ್ವಂತ ನಿಲುವು. ಬೇರೆ ಯಾವುದೇ ವಿಚಾರ, ತತ್ವ ಸಿದ್ದಾಂತಗಳು ನಮ್ಮನ್ನು ದ್ವಂಧ್ವದಲ್ಲಿಯೇ ಉಳಿಸುತ್ತವೆ. ಗೋ ಹತ್ಯೆ , ಪ್ರಾಣಿ ಬಲಿಯಂತಹ ಪದ್ದತಿಯನ್ನು ನಿಷೇಧಿಸುವುದರಿಂದ ಮುಗ್ಧ , ಮೂಕ ಪ್ರಾಣಿಗಳು ಹಿಂಸಾತ್ಮಕವಾಗಿ ಸಾಯುವುದನ್ನು ತಡೆಗಟ್ಟಬಹುದು. ನಾವು ಸಾಧಿಸಬೇಕಾಗಿರುವುದೂ ಅದನ್ನೇ ಅಲ್ಲವೇ?. ಈ ಮಹತ್ಕಾಯ೯ಕ್ಕಾಗಿ ಅಹ್ಹಾರ ಪದ್ದತಿಯಲ್ಲಿ ,ಧಾಮಿ೯ಕ ನಂಬಿಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಲ್ಲಿ ನಮಗಾಗುವ ನಷ್ಟವಾದರೂ ಏನು? ಈ ಮಟ್ಟಿಗೂ ನಮಗೆ ಸ್ವಂತ ವಿಚಾರವಿಲ್ಲವೇ? ಹಾಗಾಗದಿದ್ದಲ್ಲಿ ನಮ್ಮ ಆಧುನಿಕತೆ, ನಾಗರಿಕತೆ ಗಳಿಗೆ ಅಥ೯ ಏನಿದೆ?

ಕಾಮೆಂಟ್‌ಗಳು

  1. ಒಳ್ಳೆಯ ವಿಚಾರವನ್ನು ಪ್ರಸ್ಥಾಪಿಸಿದ್ದೀರಿ, ಗೋ ಹತ್ಯೆಯ ಬಗ್ಗೆ ಕೇಳಿದಾಗಲೆಲ್ಲ ಮೈ ಜುಮ್ಮೆನ್ನುತ್ತದೆ, ಗೋ ಹತ್ಯೆ ಮಾಡುವವರ ವಿರುದ್ದ ಸರಕಾರ ಶಿಕ್ಷೆ ಪ್ರಕಟಿಸಿದ್ದು ಸ್ಪಲ್ಪ ಸಮಾದಾನಕರವಾದ ವಿಷಯವಾಗಿದೆ. ಬ್ಲಾಗ್ ಲೋಕಕ್ಕೆ ಸ್ವಾಗತ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು. ಗೋ ಹತ್ಯೆ ಮಾಡ್ಲಾಗ ಅಂತ ಇನ್ನೂ ಕಾನೂನಾಗಲ್ಯಲ. ಎಷ್ಟು ಬೇಗ ಆಗ್ತೋ ಅಷ್ಟು ಒಳ್ಳೇದು.

    ಪ್ರತ್ಯುತ್ತರಅಳಿಸಿ
  3. ytd video downloader pro crack This article is so innovative and well constructed I got lot of information from this post. Keep writing related to the topics on your site.

    ಪ್ರತ್ಯುತ್ತರಅಳಿಸಿ
  4. recover my files crack Thank you, I’ve recently been searching for information about this subject for a long time and yours is the best I have found out so far.

    ಪ್ರತ್ಯುತ್ತರಅಳಿಸಿ
  5. avg internet security 2018 key till 2019 creates more unequivocal photographs and makes games, video web based, and media altering smoother. You can likewise appreciate more clear, more excellent sound through the refreshed sound driver.

    ಪ್ರತ್ಯುತ್ತರಅಳಿಸಿ
  6. Wow, this is a great blog design! How long are they allowed to stay in their current state?
    Have you ever created your own blog? You made the blog simple.
    Everything about your site is great, not to mention the content.I use this software and no errors or errors were discovered, so I think this is the best choice.
    Multilingual skills and collaboration have been very helpful to me.Excellent article. I really like it and I'm very impressed with your work in this article. Keep it up and keep sharing this kind of useful and useful information with us. Thank you for sharing with us.
    bitdefender antivirus crack
    youtube by click premium crack
    movavi slideshow maker crack
    anymp4 dvd ripper crack

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)