ಕಳೆದು ಹೋಗದಂತೆ.
24ನೇ ತಾರೀಕು ಅಯೋಧ್ಯೆಯ ವಿವಾದದ ಬಗ್ಗೆ ಅಲಹಾಬಾದ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಲಿದೆ. ಅರವತ್ತು ವರ್ಷಗಳಷ್ಟು ಹಿಂದಿನ ವಿವಾದವೊಂದು ಇಡೀ ಭಾರತವನ್ನೆ ತನ್ನತ್ತ ಸೆಳೆಯುತ್ತಿದೆ. ತೀಪರ್ು ಯಾರ ಕಡೆಗೆ ಬರಬಹುದು ಎನ್ನುವ ಕುತೂಹಲಕ್ಕಿಂತ, ಏನೇ ತೀಪರ್ು ಬಂದರೂ ಹಿಇಂಸಾಚಾರ ತಪ್ಪಿದ್ದಲ್ಲ ಎನ್ನುವ ಸತ್ಯ ಜನರನ್ನು ಚಿಂತಿತರನ್ನಾಗಿಸಿದೆ.
ಭಾರತದ ಸುಪ್ರಸಿದ್ದ ಮಹಾಕಾವ್ಯ ರಾಮಾಯಣದ ಕೇಂದ್ರಬಿಂಧು ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ. ಆ ಅಯೊಧ್ಯೆಯಲ್ಲಿ ಶ್ರೀ ರಾಮಮಂದಿರವೊಂದಿತ್ತು. ಕಾಲಾನಂತರ ಮುಘಲ್ ದೊರೆ ಬಾಬರ್, ಮುಸ್ಲಿಂ ಫಕೀರನೊಬ್ಬನ ಆಸೆಯಂತೆ ಆ ಮಂದಿರವನ್ನು ನಾಶ ಮಾಡಿ, ಅಲ್ಲಿ ಮಸೀದಿಯೊಂದನ್ನು ನಿಮರ್ಿಸಿದ. ಆ ಜಾಡಿನಲ್ಲೆ ಸಾಗಿ ಡಿಸೆಂಬರ್-1992ರಲ್ಲಿ ಕಾರಸೇವಕರು ಆ ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದ. ಇದು ಇಲ್ಲಿಯವರೆಗೆ ತಿಲಿದಿರುವ ಸಂಕ್ಷಿಪ್ತ ಇತಿಹಾಸ.
ನನಗನ್ನಿಸುತ್ತದೆ, ವಂಶವಾಹಿಗಳ ಮೂಲಕ ಸಾಮುದಾಯಿಕ ಭಾವನೆಗಳೂ ತಲೆಮಾರಿನಿಂದ ತಲೆಮಾರಿಗೆ ವಗರ್ಾವಣೆಯಾಗುತ್ತದೆ.ಬಾಬರ್ನ ಕೃತ್ಯದ ಪರಿಣಾಮವಾಗಿ ಜನರಲ್ಲಿ ಹುಟ್ಟಿದ ದ್ವೇಷ ಐದುನೋರು ವರ್ಷಗಳ ನಂತರ ಮಸೀದಿಯ ಧಂಸಕ್ಕೆ ಕಾರಣವಾಯಿತು. ಹಾಗೆಯೇ ಮಸೀಧಿ ಧ್ವಂಸದ ಪರಿಣಾಮ ಇನ್ನೆಲ್ಲಿಗೆ ಸಾಗುತ್ತದೆ? ಇನ್ನೊಂದು ದಿನ ಅದು ವ್ಯಕ್ತಗೊಳ್ಳಲೇಬೇಕು. ಇನ್ನೊಂದು ದಿನ ಅದು ವ್ಯಕ್ತಗೊಳ್ಳುವುದು ಧ್ವಂಸ ಮಾಡುವ ಮೂಲಕವೆ. ಇಂತಹ ಅರ್ಥಹೀನ ಧ್ವಂಸಗೊಳಿಸುವಿಕೆ ಕೊನೆಗೊಳ್ಳುವ ಭರವಸೆ ಇದೆಯೆ?
ಮಸೀದಿಯಲ್ಲೋ, ಮಂದಿರದಲ್ಲೋ ನಾವು ಮಾಡುವ ಪ್ರಾರ್ಥನೆಯ ಉದ್ದೇಶ ಏನು? ಆ ಸಮಯದಲ್ಲಿ ನಾವು ಪಠಿಸುವುದನ್ನೇ ಹೇಳುವುದಾದರೆ,ದೇವರಿಗೆ ನಮ್ಮನ್ನು ನಾವು ಸಂಪೂರ್ಣವಾಗಿ ಸಮಪರ್ಿಸುವ ಉದ್ದೇಶ ಅಲ್ಲಿದೆ. ಆದರೆ ವಾಸ್ತವದಲ್ಲಿ ನಮ್ಮಲ್ಲಿ ಅಂತಹ ಸಮರ್ಪಣಾ ಭಾವನೆಯೇನೂ ಇರುವುದಿಲ್ಲ. ನಿಜವಾಗಿಯೂ ಆ ಭಾವ ನಮ್ಮಲ್ಲಿದ್ದಿದ್ದರೆ, ನಾವು ಇನ್ನೊಬ್ಬರನ್ನು ದೇಷಿಸುವ ಅಗತ್ಯವೇ ಇರಲಿಲ್ಲ.
ಪ್ರಾರ್ಥನೆಯು ನಮ್ಮಲ್ಲಿ ಹೃದಯ ವೈಶಾಲ್ಯವನ್ನುಂಟುಮಾಡಬೇಕು. ಆದರೆ ಅಂತಹದ್ದೇನೋ ಒಂದು ಯಾರಲ್ಲಿಯೂ ಜರುಗಿದಂತೆ ಕಾಣುತ್ತಿಲ್ಲ. ಕಾರಣ ನಾವು ಸುಮ್ಮನೆ ದೊಡ್ಡಸ್ತಿಕೆಯನ್ನು ತೋರಿಸಲಿಕ್ಕಾಗಿ ದೇವರು, ಮಂದಿರ, ಮಸೀದಿಗಳನ್ನು ಬಳಸಿಕೊಳ್ಳುತ್ತೇವೆ. ಪ್ರತಿಯೊಂದು ಧರ್ಮಗ್ರಂಥವೂ, ಮುಖ್ಯವಾಗಿ,ಪ್ರೀತಿ, ಸತ್ಯ, ನಿಷ್ಕಪಟತೆ,ಶಾಂತಿಯನ್ನು ಮತ್ತೆ ಮತ್ತೆ ಬೋಧಿಸುತ್ತವೆ. ನಮಗೆ ಅದ್ಯಾವುದೂ ನೆನಪಿರುವುದಿಲ್ಲ, ನಾವದನ್ನು ಆಚರಣೆಗೆ ತರುವುದೂ ಇಲ್ಲ. ಆದರೆ ಎಲ್ಲೋ ಒಂದು ಕಡೆ ಒಂದೆರೆಡು ವಾಕ್ಯಗಳು ಧರ್ಮ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧನಾಗು, ಖಡ್ಗಹಿಡಿ ಎಂದು ಹೇಳಿದ್ದರೆ, ಧರ್ಮಗ್ರಂಥದ ತುಂಬಾ ಅದನ್ನೇ ಬೋಧಿಸಲಾಗಿದೆ ಎನ್ನುವಂತೆ ವತರ್ಿಸುತ್ತೇವೆ. ನಾವು ಮಾಡುವುದು, ಯೊಚಿಸುವುದು ನಮಗಿಷ್ಟವಾದದ್ದನ್ನೇ ಹೊರತು, ಧರ್ಮಗ್ರಂಥಗಳು ಬೋಧಿಸುವುದನ್ನಲ್ಲ.
ದಿನ ನಿತ್ಯದ ಬದುಕಿನಲ್ಲಿ ನಾವು ಜಾತಿ, ಮತಗಳ ಪ್ರಶ್ನೆಯಿಲ್ಲದೆ ಒಬ್ಬರನ್ನೊಬ್ಬರು ಅವಲಂಬಿಸಿರುತ್ತೇವೆ. ಆಗ ನಮಗೆ ಜೀವನ ನಡೆಸಲು ಅಗತ್ಯವಾದದ್ದನ್ನೆಲ್ಲ ಕೊಟ್ಟಿರುವುದು, ನಮ್ಮ ಸುತ್ತ ಮುತ್ತಲಿನ ಜನರು, ಧರ್ಮಗ್ರಂಥಗಳಲ್ಲ. ಆದರೆ, ಈ ಧರ್ಮಗ್ರಂಥಗಳ, ಧಾಮರ್ಿಕ ಮುಖಂಡರ ಮಾತಿನಿಂದ ನಮ್ಮ ಜೀವನಕ್ಕೆ ಆಗಿ ಬಂದವರನ್ನೇ ಕೊಲ್ಲುತ್ತೀವೆಂದರೆ ಇದ್ಯಾವ ನಾಗರೀಕತೆ? ಆಗ ನಾವು ಕೇವಲ ಕೀಲಿ ಕೊಟ್ಟ ಗೊಂಬೆಗಳು.
ಬಾಬರ್ ಮಸಿದಿ ಕಟ್ಟುವುದಕ್ಕಿಂತ ಮೊದಲು ಆ ಜಾಗದಲ್ಲಿ ರಾಮ ಮಂದಿರವಿತ್ತು. ರಾಮ ಮಂದಿರಕ್ಕಿಂತಲೂ ಮೊದಲು......? ಆ ಭೂತಕಾಲವೂ ನಮಗೆ ತಿಳಿದಿಲ್ಲ. ಇನ್ನು ಸಾವಿರ ವರ್ಷಗಳ ನಂತರ ಏನಾಗುತ್ತದೆ? ಅದೂ ನಮಗೆ ತಿಳಿದಿಲ್ಲ. ನಾವೀಗ ಜೀವಿಸಿದ್ದೇವೆ, ಅದಷ್ಟೇ ಸತ್ಯ. ಈ ಜೀವನವನ್ನೇಕೆ ನರಕ ಮಾಡಿಕೊಳ್ಳೋಣ? ಪರಿವರ್ತನೆ ಜಗದ ನಿಯಮ. ಅದೇನಾಗುತ್ತದೋ ಆಗಲಿ, ಅದು ಜಗದ ನಿಯಮ. ಏನಾದರೂ ಬರಲಿ, ನಾವು ಸೌಹಾರ್ದಯುತವಾಗಿರೋಣ, ಇದು ಮನುಷ್ಯನ ನಿಯಮ ಅಲ್ಲ, ಅವಶ್ಯಕತೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ