ಆಹ್ವಾನ

 ಹರಿವ ನದಿಯ ದಾರಿಯಲ್ಲಿ
 ಕಲ್ಲು ಮುಳ್ಳು ಏನೆ ಇರಲಿ
 ಎಲ್ಲ ಮೀರಿ ಸೇರುವುದು ಸಾಗರವನ್ನು
 ಜೀವನದಲಿ ನೂರು ನೋವು
 ಕಷ್ಟ ನಷ್ಟ ಏನೇ ಇರಲಿ
 ನಾನು ಕೂಡ ನಿಲ್ಲದಂತೆ ಸಾಗುತಿರುವೆನು

 ಜನಿಸಿದ ಪ್ರತಿ ಜೀವಿಗಿಲ್ಲಿ
 ನೋವು ಕಷ್ಟ ದುಃಖ ಸಹಜ
 ಅದರ ಜೊತೆಯೆ ನೂರು ನಲಿವು ತೇಲಿ ಬರುವುದು
 ಈ ಪಯಣದ ಸಾರ್ಥಕತೆಗೆ
 ಇಲ್ಲಿರುವ ಉಪಾಯ ಒಂದೆ
 ಬಾಳಿನ ಪುಟ ಪುಟಗಳಲ್ಲಿ ಒಲವ ತರುವುದು!

 ನಾನು ಇಲ್ಲಿ ಸಾಗುತಿರುವೆ ಒಂಟಿಯಾಗಿ ದಾರಿಗುಂಟ
 ನೀನು ಬರುವೆಯೇನು ನನ್ನ ಬಾಳ ಪಥದಲಿ?
 ನನ್ನ ನಿನ್ನ ನೋವು ನಲಿವು
 ಬೇರೆ ಬೇರೆ ಅಲ್ಲ ಮುಂದೆ
 ನಮ್ಮದಾಗಿ ಸ್ವೀಕರಿಸಿ ನಡೆವ ಜೊತೆಯಲಿ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )