'ಅಗ್ನಿ'ಜ್ವಾಲೆ ಅನಂತದೆಡೆಗೆ
ಕ್ಷಣ ಕ್ಷಣವು ಉರಿದುದುರಿದು
ಪ್ರಖರತೆಯ ಸಿರಿ ಬಿರಿದು
ಧಗಧಗಿಸಿ ಉರಿಯುತ್ತಲುರಿಯುತ್ತಲೆ
ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !
ರಾಷ್ಟ್ರ ಕೀರ್ತಿಯ ವಿಶ್ವದಂಚಂಚಿಗೆ ಹರಡಿ
ರಾಷ್ಟ್ರ ರಾಷ್ಟ್ರಗಳಿಗೆ ತನ್ನ ನೆಲದ ಬಲವನು ತೋರಿ
ರಾಷ್ಟ್ರದೇಳಿಗೆಯ ಮಂತ್ರ ಪಠಿಸುತ್ತ ಜಪಿಸುತ್ತ
ಬಿಸಿ ಕಾವು ಉಳಿಸಿ
ಸಾಗಿ ಹೋಯಿತು ಅಗ್ನಿ ಜ್ವಾಲೆ ಅನಂತದೆಡೆಗೆ !
ತೋರುವುದು ಯಾವುದೂ ತಡೆಗೋಡೆಯಲ್ಲ
ಪರಿಶ್ರಮ ಸೀಳುವುದು ತಡೆಗೋಡೆಯೊಡಲ
ಒಳಿತಿನ ಹಂಬಲವೆ ಜೀವನದ ಕೀರ್ತಿ
ಎಲ್ಲರಲಿ ಒಲವೇ ಜೀವನಕೆ ಸ್ಪೂರ್ತಿ
ಎಂಬುದನು ತಿಳಿಸಿ
ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !
ಕಾಶ್ಮೀರದಂಚಿಂದ ಕನ್ಯಾ ಕುಮಾರಿ
ಹಂಬಲಿಸಿ ಹಂಬಲಿಸಿ ಕಂಬನಿಯ ಬೀರಿ
ಸೂತಕದ ಯಾತನೆಯ ಪಡುವಂತೆ ಮಾಡಿ
ನುಡಿ ನುಡಿವ ಮುನ್ನವೇ
ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ