ಕರುಣೆಸುಧೆ..
ಕಾಯವಳಿದು ಹೋದರೇನು ಖ್ಯಾತಿಯಳಿಯದು
ಕರುಣೆ ಸುಧೆಯ ಕಡಲಿಗಿರುವ ಒರತೆ ಬತ್ತದು
ಕರುಣೆ ಸುಧೆಯ ಕಡಲಿಗಿರುವ ಒರತೆ ಬತ್ತದು
ಕಂಡರೆಷ್ಟೋ ಜನರು ಅಂದು ತಮ್ಮ ಕಣ್ಣಲೆ
ಮರುಕದಿಂದ ತೋರಿದಂತ ಮಹಿಮೆ ಹಲವನು
ಮಿಂದರೆಷ್ಟೋ ಜನರು ಆನಂದ ಕಡಲಲೆ
ಪಡೆದ ಕ್ಷಣವೆ ದಿವ್ಯವಾದ ಪರಮಕೃಪೆಯನು
ಮರುಕದಿಂದ ತೋರಿದಂತ ಮಹಿಮೆ ಹಲವನು
ಮಿಂದರೆಷ್ಟೋ ಜನರು ಆನಂದ ಕಡಲಲೆ
ಪಡೆದ ಕ್ಷಣವೆ ದಿವ್ಯವಾದ ಪರಮಕೃಪೆಯನು
ತನುವು ಮನವು ತಲುಪದಂತ ಗಮ್ಯವಾವುದೋ
ಅದರ ಮೂಲ ತಲುಪಿ ನೀನು ಸರ್ವವ್ಯಾಪಿಯು
ಧನವು ತಪವು ಒಂದುಗೂಡಿ ಸಾಗುತಿರುವುದು
ಭಕ್ತ ಜನರ ಬೇಗೆ ತಡೆವ ಧರ್ಮ ಕಾರ್ಯವು
ಅದರ ಮೂಲ ತಲುಪಿ ನೀನು ಸರ್ವವ್ಯಾಪಿಯು
ಧನವು ತಪವು ಒಂದುಗೂಡಿ ಸಾಗುತಿರುವುದು
ಭಕ್ತ ಜನರ ಬೇಗೆ ತಡೆವ ಧರ್ಮ ಕಾರ್ಯವು
ಅಂದು ಇಂದು ಎಂದೆಂದಿಗೂ ಒಂದೆತರದಲಿ
ಸ್ವಾನಂದದ ಅಮೃತವನ್ನು ಪಾನ ಮಾಡುತ
ಶರಣು ಎಂದು ಬಂದ ಜನರ ಕರುಣೆಯಿಂದಲಿ
ಕೃಪೆಯ ತೋರಿ ಮೈಯದಡವಿ ಪೊರೆವೆ ಸಂತತ
ಸ್ವಾನಂದದ ಅಮೃತವನ್ನು ಪಾನ ಮಾಡುತ
ಶರಣು ಎಂದು ಬಂದ ಜನರ ಕರುಣೆಯಿಂದಲಿ
ಕೃಪೆಯ ತೋರಿ ಮೈಯದಡವಿ ಪೊರೆವೆ ಸಂತತ
ಶೃತಿಯು ಸ್ಮತಿಯು ಸಾರಿ ನುಡಿವ ನುಡಿಗಳೆಲ್ಲವು
ನಿನ್ನದೆಂಬ ಮಾತು ನೀನು ನುಡಿದು ತಿಳಿದೆನು
ಕೈಯ ಮುಗಿವೆ ನಿನಗೆ ನಾನು ಶರಣು ಎನ್ನುತ
ನಿತ್ಯ ಸತ್ಯ ನೀನು ಎಂಬದೆನ್ನ ಹೃದ್ಗತ.
ನಿನ್ನದೆಂಬ ಮಾತು ನೀನು ನುಡಿದು ತಿಳಿದೆನು
ಕೈಯ ಮುಗಿವೆ ನಿನಗೆ ನಾನು ಶರಣು ಎನ್ನುತ
ನಿತ್ಯ ಸತ್ಯ ನೀನು ಎಂಬದೆನ್ನ ಹೃದ್ಗತ.
ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು, ವರದಹಳ್ಳಿ |
ತುಂಬಾ ಚೆನ್ನಾಗಿದ್ದು, ಜಯ ಜಯ ರಘುವೀರ ಸಮರ್ಥ.
ಪ್ರತ್ಯುತ್ತರಅಳಿಸಿ