ಮಧುರ ನೆನಪಲಿ....

ಮರೆತೆ ಹೋಗದು ಭಾವಕೊಲಿದಿಹ
ಮಾತಿಗೊಲಿಯದ ಪದಗಳು
ಸ್ವಚ್ಛವಾಗಿಯೆ ಮೂಡಿ ಬಂದಿಹ
ನುಡಿಯಲಾಗದ ನುಡಿಗಳು

ಮೌನದಲಿ ಸವಿ ಸವಿಯಬೇಕಿಹ
ಸಿಹಿಯ ಮೀರಿದ ಸಿಹಿಯದು
ಕಿವಿಯ ತಲುಪದು ಹೃದಯ ಕೇಳುವ
ಹೃದಯಗಾನದ ಸವಿಯದು

ಯಾವ ಕಾರಣವೆಂಬುದಿಲ್ಲದೆ
ಮೂಡಿ ಬಂತೆಲೆ ಸುಮ್ಮನೆ
ಬಂದು ಹೋಗುತ ನೀಡಿ ಹೋಗಿದೆ
ಮರೆಯಲಾರದ ನೆನಪನೆ

ಇಂದು ಕುಳಿತೆಡೆ, ಒರಗಿ ಕೊಂಡೆಡೆ
ನೆನಪಾಯ್ತು  ಆ ಹಿತ ಒಮ್ಮೆಲೆ
ನುಡಿಯಲಾರದೆ ಪದಗಳಲಿ ಹಿತವನು
ನಗು ನಗುವೆ ಸುಕಾಸುಮ್ಮನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಬ್ಬಗೆಯ ನೀತಿ ಏಕೆ?

ಭಾವ ಮಳೆ ಸುರಿದೊಡನೆ....(ಕವನ)

ಯಾರೂ ಓದದ ಪುಸ್ತಕ.