ಯಾರೂ ಓದದ ಪುಸ್ತಕ.
ರಾಶಿ ರಾಶಿ ಪುಸ್ತಕಗಳ ನಡುವೆ ,
ಪ್ರತೀ ಪುಸ್ತಕ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುವ ಆ ಪುಸ್ತಕ.
ಯಾರೊಬ್ಬರೂ ಪುಟ ತಿರುಗಿಸದೆ,
ಬಂದಂತೆ, ತಂದಂತೆ, ಇದ್ದು ಎದ್ದು ಹೋಗುವ,
ಯಾರೂ ಓದದ ಪುಸ್ತಕ.
ಗರ್ಭದಿಂದ ಜೀವವೊಂದು ಜಾರುವಂತೆ,
ಮುದ್ರಣಗೊಂಡು ಅದು ಬಂದದ್ದು 'ಪುಸ್ತಕಲೋಕ'.
ದಪ್ಪವೆನಿಲ್ಲ , ಬಣ್ಣ ಚಿತ್ತಾರಗಳೂ ಇಲ್ಲ ಎಂದು ಹೇಳಲು
ಓದಿದವರಾರೂ ಇಲ್ಲ.
ಮಾಸಲು ಬಣ್ಣಕ್ಕೆ ತಿರುಗಿದ ಪುಸ್ತಕದ ಒಳಪುಟಗಳು
ಹೇಗಿವೆಯೋ ಗೊತ್ತಿಲ್ಲ.
ಸದ್ದು ಗದ್ದಲವಿಲ್ಲದೆ ಬಂದು ಕುಳಿತ ಅದು
ಹೋದದ್ದೂ ಗೊತ್ತಿರುವುದಿಲ್ಲ.
ಯಾವ ದೊಡ್ಡ ದೊಡ್ಡ ಹೆಸರುಗಳೂ ಕಾಣುವುದಿಲ್ಲ.
ಚುಚ್ಚುಮದ್ದು ಹಾಕಿಸಿಕೊಳ್ಳದ ಮಗುವಿನಂತೆ
ಕಿಲಕಿಲ ನಗುತ್ತಿರುತ್ತದೆ.
ರೋಗಗ್ರಸ್ತ ವದ್ಯರು ಗಮನಿಸಿರುವುದಿಲ್ಲ.
ನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ.
ನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ.
ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ.
ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು
ಎನ್ನುವ ಭಯದಿಂದ, ತಕ್ಷಣ ಎತ್ತಿಕೊಳ್ಳುತ್ತೇನೆ.
ಪ್ರತೀ ಪುಸ್ತಕ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುವ ಆ ಪುಸ್ತಕ.
ಯಾರೊಬ್ಬರೂ ಪುಟ ತಿರುಗಿಸದೆ,
ಬಂದಂತೆ, ತಂದಂತೆ, ಇದ್ದು ಎದ್ದು ಹೋಗುವ,
ಯಾರೂ ಓದದ ಪುಸ್ತಕ.
ಗರ್ಭದಿಂದ ಜೀವವೊಂದು ಜಾರುವಂತೆ,
ಮುದ್ರಣಗೊಂಡು ಅದು ಬಂದದ್ದು 'ಪುಸ್ತಕಲೋಕ'.
ದಪ್ಪವೆನಿಲ್ಲ , ಬಣ್ಣ ಚಿತ್ತಾರಗಳೂ ಇಲ್ಲ ಎಂದು ಹೇಳಲು
ಓದಿದವರಾರೂ ಇಲ್ಲ.
ಮಾಸಲು ಬಣ್ಣಕ್ಕೆ ತಿರುಗಿದ ಪುಸ್ತಕದ ಒಳಪುಟಗಳು
ಹೇಗಿವೆಯೋ ಗೊತ್ತಿಲ್ಲ.
ಸದ್ದು ಗದ್ದಲವಿಲ್ಲದೆ ಬಂದು ಕುಳಿತ ಅದು
ಹೋದದ್ದೂ ಗೊತ್ತಿರುವುದಿಲ್ಲ.
ಯಾವ ದೊಡ್ಡ ದೊಡ್ಡ ಹೆಸರುಗಳೂ ಕಾಣುವುದಿಲ್ಲ.
ಚುಚ್ಚುಮದ್ದು ಹಾಕಿಸಿಕೊಳ್ಳದ ಮಗುವಿನಂತೆ
ಕಿಲಕಿಲ ನಗುತ್ತಿರುತ್ತದೆ.
ರೋಗಗ್ರಸ್ತ ವದ್ಯರು ಗಮನಿಸಿರುವುದಿಲ್ಲ.
ನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ.
ನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ.
ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ.
ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು
ಎನ್ನುವ ಭಯದಿಂದ, ತಕ್ಷಣ ಎತ್ತಿಕೊಳ್ಳುತ್ತೇನೆ.
ಚೆನಾಗಿದ್ದು :-)
ಪ್ರತ್ಯುತ್ತರಅಳಿಸಿಯಾರಾದರೂ ಎತ್ತಿಕೊಳ್ಳುವರು ಬೇಕೆಂದು ಅದೂ ಕಾಯುತ್ತಾ ಇರುತ್ತದೆ.. ಒಳ್ಳೆ ಕವನ .
ಪ್ರತ್ಯುತ್ತರಅಳಿಸಿಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಸದಾ ಇರಲಿ
ಅಳಿಸಿgood one brother.... www.benakakr.blogspot.com
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ.
ಪ್ರತ್ಯುತ್ತರಅಳಿಸಿನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ.
ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ.
ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು
ಎನ್ನುವ ಭಯದಿಂದ, ತಕ್ಷಣ ಎತ್ತಿಕೊಳ್ಳುತ್ತೇನೆ....ತುಂಬಾ ಚೆಂದಾದ ಸಾಲುಗಳು ...ತುಂಬಾ ಇಷ್ಟವಾಯ್ತು ಮಾಸ್ತರೇ
ಧನ್ಯವಾದಗಳು
ಅಳಿಸಿ