ಭ್ರಾಂತ ಏಕಾಂತ
ಕತ್ತಲ ರಾತ್ರಿಯ ನೀರವ ಮೌನದಿ ನೆನಪಾಗಿಹೆ ನೀನು.
ಕಣ್ಣನು ಮುಚ್ಚಲು ಮೌನವ ಸೀಳಿ ನುಡಿಯುವೆ ಏನೇನೋ.
ಕಂಠದ ಮಧುರತೆ ಮತ್ತೇರಿಸುತಿದೆ, ತೇಲುತಿಹೆ ನಾನು.
ಎದುರಿಗೆ ಬಾರದೆ ಕಾಡುವೆ ಹೀಗೆ ,ಕಾರಣ ಹೇಳಿನ್ನು.
ಕಣ್ಣನು ಮುಚ್ಚಲು ನನ್ನೆಡೆ ಬಂದು ಸೂಸುವೆ ಹೂ ನಗೆಯ,
ಕಣ್ಣಲೆ ಹೇಳುವೆ ನೋಡುತ ನನ್ನನೆ ಏನೋ ಭಾವನೆಯ.
ಭಾವನೆ ಅರ್ಥವ ಅರಿಯಲಾಗದೆ ನಾ ಪದುತಿಹೆ ಯಾತನೆಯ,
ಕರೆಯಲೇ, ನಿನ್ನನು ಭ್ರಾಂತಿಯ ತುಂಬಿ ಕಾಡುತಿಹ ಮಾಯಾ?

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ