ಹೇಳು.

ತೇಲುವ ಮೇಘದ ಮೇಗಡೆಯೆಲ್ಲೋ ಅಡಗಿಹೆಯಾ ನೀನು?
ನೀ ಹನಿಯಾಗಿ ಇಳಿಯುವೆಯೆಂದು ಕಾಯುತಿಹೆ ನಾನು.
ನೀ ಸೂಸಿದರೆ ಹೂನಗೆಯನ್ನು ಹೂವಿಗೂ ನಗುವುಂಟು,
ನಿನ್ನಯ ಕಂಗಳ ಬೆಳಕನು ಕಂಡರೆ ರವಿಗೂ ಹೊಳಪುಂಟು.
ನಿನ್ನಯ ದನಿಯ ಮಧುರತೆಯೆದುರು ಕೋಗಿಲೆಗೆಣೆಯುಂಟೆ?
ನನ್ನೀ ಕಲ್ಪನೆ ಹಿಂದೆ ತುಂಬಿಹ ಪ್ರೀತಿಗೆ ಕೊನೆಯುಂಟೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?