ಒಳಗುಟ್ಟು......

ಆ ಅಮೃತ ಬಿಂದು ಮುಗಿಲಿಂದ ಬಂದು

ಇಳೆ ಒಡಲ ಸೇರಿ ಹೋಯ್ತು.

ಬೆಂದೊಡಲ ತಾಕಿ ದೈನ್ಯವನು ನೂಕಿ

ಎಲ್ಲೆಲ್ಲವು ಹಸಿರಾಯ್ತು.


ಇದು ಎಂಥ ನೀತಿ? ವೈಚಿತ್ರ್ಯ ರೀತಿ!

ಹಸಿರಲ್ಲ ನೀರ ಬಣ್ಣ.

ಭುವಿಯಿಂದ ಮಾತ್ರ ಚಿಗುರುವುದು ಹಸಿರು

ತುಂಬುವುದು ನನ್ನ ಕಣ್ಣ.


ಇರಬಹುದು ಹೀಗೆ, ಜಲಧಾರೆ ತಾನು

ಇಳೆ ತಬ್ಬಿ ಹಬ್ಬಿದಾಗ,

ಒಳಗೊಳಗೆ ಪುಳಕಗೊಳ್ಳುತಲಿ ಭುವಿಯು

ಹಸಿರನ್ನೇ ಹೇರುವುದಾಗ.


ಜಲವೇ ಒಂದು ನೆಲೆ ,ಭುವಿಯೇ ಬೇರೆ ಸೆಲೆ

ಭಿನ್ನ ಒಂದು ಮತ್ತೊಂದರಿಂದ.

ಹೊಸ ಜೀವವೊಂದು ಹೊಮ್ಮುವುದು ಇಲ್ಲಿ

ಪ್ರೇಮಪೂರ್ಣ ಸಮ್ಮಿಲನದಿಂದ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?