ಪೋಸ್ಟ್‌ಗಳು

ಕೃತಘ್ನನ ಕೃತಜ್ಞತೆ.

ಇಮೇಜ್
          ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ  ಸುಸ್ತಾಗಿ ಮರಕ್ಕೆ  ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್  ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ  ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು.  ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !   ಸರಿಯಾಗಿ  ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು‌. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರ...

ಏಕಮೇವ ಕೋರಿಕೆ.

ಇಮೇಜ್
ಸುಖ ಬರುವುದು, ನಲಿವಿರುವುದು ಸಂತೋಷತಾನೆ...! ಅದರ ಜೊತೆಜೊತೆಯೇ ಕಷ್ಟವೂ ಬರಲಿ, ನೋವೂ ಬರಲಿ ಬರಬೇಕಾದುದೆಲ್ಲವೂ ಬಂದೇ ಬರಲಿ ಅದು ಸಹಜವೇನೇ...! ಆದರೆ ನೀ ಎನ್ನ ತೊರೆವ ಕ್ಷಣ, ಕೈ ಬಿಟ್ಟು ನಡೆವ ಕ್ಷಣ, ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ.... ಶ್ರೀಗುರುವೇ... ಅದು ಮಾತ್ರ ಎಂದಿಗೂ ಬಾರದಿರಲಿ! ಆ ದಿನವ ಈ ಬಾಳು ಕಾಣದಿರಲಿ.!!

ಮುಳುಗಡೆಯಾಗದ ನೆನಪುಗಳು...

ಇಮೇಜ್
        ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಆ ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು . ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾ...

ಜಿ ವಿ ಅತ್ರಿಯ ನೆನಪಿನಲ್ಲಿ...

ಇಮೇಜ್
ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರ...

ಕಳೆದು ಹೋಯಿತು..

ಇಮೇಜ್
ಅಂದು ತಾಷ್ಕಂಟಿನಲಿ ಕಳೆದುಕೂಂಡೆವು ನಾವು ಅತಿ ವಿರಳ, ಬಹು ಸರಳ ರತ್ನವೊಂದ. ವರುಷ ಐವತ್ತೊಂದು ಕಳೆದು ಹೋದರು ಕೂಡ  ಪಡೆಯದಾದೆವು ಮರಳಿ ಅಂತದ್ದೊಂದ. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಎತ್ತರದ ಪದವಿಯಲಿ ಈ ಜನಾನುರಾಗಿ ಕುಳಿತು ಆಳಿದರು ಹದಿನೇಳು ತಿಂಗಳು ನೆನಪಾಗಿ ಅರಳುವುದು ಸಂತಸದಿ ಕಂಗಳು ಶತ್ರುಗಳು ಬಂದು ಮುತ್ತಿಗೆಯ ಹಾಕಿದರು ಒಂದಿನಿತು ಕೂಡ ಅಳುಕಲಿಲ್ಲ ಇವರು ಆಯುಧಕೆ ಆಯುಧದೆ ಕೊಡುವೆವುತ್ತರವೆಂದು ಸಾರಿದರು ಅತಿಘೋರ ಸಮರವಂದು ದೇಶದೊಳಿತಿಗೆ ಮಾಡಿ ಉಪವಾಸವೆಂದು ತಮ್ಮಿಂದಲೇ ಅದನು ಜಾರಿಯಲಿ ತಂದು ಗೆದ್ದರು ದೇಶ ವಾಸಿಗಳ ಹೃದಯ ಎಂದೆಂದಿಗೂ ಅದುವೆ ಅವರಾಲಯ ವಾಮನಾಕಾರದಲಿ ಕಣ್ಣ ಕೋರೈಸುವುದು ಸರಳತೆಯ ಹಿಂದಿರುವ ದಿವ್ಯ ಪ್ರಕಾಶ ಪಾದಕೆರಗಿ ಒಮ್ಮೆ ನಮಿಸಬೇಕಿದೆ ಅದಕೆ ಎಂದಾದರೊಂದುದಿನ ಸಿಕ್ಕರವಕಾಶ. ( ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೫೨ನೇ ಪುಣ್ಯ ತಿಥಿ: ದಿನಾಂಕ ೧೧-೦೧-೨೦೧೮)

ಕಾಲ-ಯಾನ

ಕಣ್ಣಿಗೆ ಕಾಣದೆ ಸಾಗುತಲಿರುವ ಅದೃಶ್ಯ ಪಯಣಿಗ ಕಾಲ ಸಾಗಿದೆ ಇಲ್ಲಿಂದಲ್ಲಿಗೆ ಆದರೂ ಇಲ್ಲ ಕಾಲೂ ಬಾಲ. ನೂರಾಸೆಗಳ ಕುದುರೆಯ ಹತ್ತಿ ಹಿಡಿತವೆ ಇಲ್ಲದೆ ಸಾಗುತಲಿಹೆವು ಸರಿಯುತಲಿಹ ಈ ಕಾಲದ ಜೊತೆಯಲೆ ಎತ...

ಎದೆಯೊಳಗಿನ ಮಳೆ.....

ಭೋರ್ಗರೆವ ಮಳೆ ನನ್ನೊಳಗೆ ಬೆಚ್ಚನೆ ಮುಚ್ಚಿಹ ಪದರನು ಸಡಿಲಿಸಿ ಒಳಗಣ ನೆನಪನು ಕೆದಕುತಿದೆ ನೂರಾಸೆಯ ಒಡಲನು ತಟ್ಟುತಿದೆ ಭಿರುಬೀಸಿನ ಈ ಮಳೆಯ ಆರ್ಭಟಕೆ ಮನದ ಸಂಯಮವೆ ಹಾರುತಿದೆ ಸಶಕ್ತವಲ್ಲದ ಕದವನು ಒ...