ಪೋಸ್ಟ್‌ಗಳು

ಎರಡು ಧ್ರುವಗಳ ನಡುವೆ (ಕತೆ )

ನನ್ನ  ಕನ್ನಡಕವನ್ನ  ತೆಗೆದು  ಕಣ್ಣೀರು  ಒರೆಸಿಕೊಂಡು ವಾರಿಜಾಳನ್ನು  ನೋಡಿದೆ.  ಶಿವರಾಮು ಹಾಗೂ  ವಾರಿಜ ಒಂದು ಕಾಲದಲ್ಲಿ   ಎಷ್ಟೊಂದು  ಹತ್ತಿರ  ಇದ್ದವರು  ನಂತರ   ಅದೆಷ್ಟು  ದೂರ ಆಗಿಬಿಟ್ಟರು! ಅವಳು ಅಲ್ಲಿ ಬೆಂಗಳೂರಿನಲ್ಲಿ  ,  ಇವನು  ಈ  ಹಳ್ಳಿಯಲ್ಲಿ   ಬದುಕನ್ನು   ಸವೆಸಿಬಿಟ್ಟರು.  ಇವತ್ತು ವಾರಿಜ  ಶಿವರಾಮುವಿಗೆ ಮತ್ತೆ  ಇಷ್ಟು  ಹತ್ತಿರದಲ್ಲಿದ್ದಾಳೆ  ಆದರೆ ಅವರು  ಮೊದಲಿನಂತೆ  ಒಂದಾಗಿರಲು   ಸಾಧ್ಯವಿಲ್ಲ,  ಯಾಕೆಂದರೆ  ಶಿವರಾಮು ಕಣ್ಣೆದುರಿಗಿನ  ಚಿತೆಯಲ್ಲಿ  ಸುಟ್ಟು ಬೂದಿಯಾಗುತ್ತಿದ್ದಾನೆ!  ಇದಕ್ಕೆಲ್ಲ  ಸಾಕ್ಷಿಯಾಗಿ ನಾನು  ನಿಂತಿದ್ದೇನೆ!!  ಹೀಗೆಲ್ಲ  ಯೋಚಿಸುತ್ತ  ಕಣ್ಣೆದುರಿಗೆ   ಧಗಧಗಿಸುತ್ತಿದ್ದ  ಬೆಂಕಿ  ಜ್ವಾಲೆಯನ್ನೇ  ನೋಡುತ್ತಾ  ನಿಂತಿದ್ದೆ .ವಾರಿಜ ಕೂಡ  ತದೇಕಚಿತ್ತವಾಗಿ  ಚಿತೆಯನ್ನೇ  ನೋಡುತ್ತಾ  ನಿಂತಿದ್ದಳು.ಎಲ್ಲವೂ  ಮುಗಿದು ಹೋಗಿ  ಕಣ್ಣೀರಷ್ಟೇ ಆಕೆಯಲ್ಲಿ  ಉಳಿದಿತ್ತು. ನಮ್ಮ  ಕಣ್ಣೆದುರಿಗೆ   ಉರಿಯುತ್ತಿದ್ದ   ಬೆಂಕಿ ಮಾತ್ರ  ಯಾವ  ಭಾವನೆಗಳ  ತಾಕಲಾಟವೂ  ಇಲ್ಲದೆ ತನ್ನ  ಪಾಡಿಗೆ  ತಾನು    ನಮ್ಮ  ಬದುಕಿನ  ಭಾಗವಾಗಿದ್ದ  ಶಿವರಾಮುವನ್ನು  ನಮ್ಮ ಪಾಲಿನ  ನೆನಪಾಗಿ  ಬದಲಾಯಿಸುತ್ತಿತ್ತು.                       **********                ನಾನು ಹಾಗೂ  ಶಿವರಾಮು ಗೆಳೆಯರು  ಎಂದಷ್ಟೇ  ಹೇಳಿದರೆ  ಅದು  ನಮ್ಮ  ಸಂಬಂಧವನ್ನು ಸರಿಯಾಗಿ  ತಿಳಿಸಿದಂತೆ  ಆಗುತ್ತದೆ  ಎಂದು  ನನಗ

ಆ ಒಂದು ದಿನ. (ಕಥೆ )

   ಸಣ್ಣ ಧ್ವನಿಯಲ್ಲಿ  ರಿಂಗಣಿಸುತ್ತಿರುವ  ಮೊಬೈಲನ್ನು ತೆಗೆದುಕೊಂಡು ಕಿವಿಗಿಟ್ಟುಕೊಂಡ ಧನಂಜಯ .ರಾತ್ರಿ ಮಲಗಿದ್ದೆ 2 ಗಂಟೆಗೆ. ಕಣ್ಣು ತೆರೆಯಲು  ಮನಸ್ಸು  ಒಪ್ಪುತ್ತಿರಲಿಲ್ಲ.  ಗಾಢ ನಿದ್ದೆಯ ಮಂಪರು ಕಣ್ಣಿನಲ್ಲಿದ್ದರೂ, ಬಂದ ಫೋನು ಯಾರದ್ದೆಂದು ರಿಂಗ್ ಟೋನಿನಿಂದ ಗೊತ್ತಾಯಿತು.       'ಹಲೋ... ಈಗಷ್ಟೇ ಮಲಗಿದ್ದಲ್ವಾ?...ಮತ್ತೆ  ಫೋನಿಗೆ ಬಂದ್ಯಾ......  ನಿಂಗೆ..  ನಿದ್ದೆ....' ನಿದ್ದೆಯ ಸೆಳೆತದಲ್ಲಿ  ಧನಂಜಯ ಮಾತು ಮುಂದುವರೆಸುತ್ತಿರುವಾಗಲೇ  ಅವನ ಮಾತು ತುಂಡರಿಸಿ ಸ್ವಾತಿ ಹೇಳಿದಳು.  ' ನನ್ನ ಮಾತು ಸರಿಯಾಗಿ ಕೇಳಿಸ್ಕೊ. ನಾನು ನಿನ್ ಜೊತೆ  ಮಾಡ್ಕೊಂಡ   ಎಂಗೇಜ್ಮೆಂಟನ್ನ  ಮುರ್ಕೊಳ್ತಾ ಇದೀನಿ. ನಂಗೆ  ನಿನ್ನ  ಮದ್ವೆ ಆಗೋಕೆ ಇಷ್ಟ ಇಲ್ಲ. ನಂಗೆ ಇನ್ಮೇಲೆ ಫೋನ್ ಮಾಡ್ಬೇಡ.  ಕನ್ವಿನ್ಸ್  ಮಾಡೋಕು ಬರ್ಬೇಡ. ಗುಡ್ ಬೈ' ಇಷ್ಟು ಹೇಳುತ್ತಿದಂತೆ ಫೋನ್ ಕಟ್  ಆಯಿತು.ತಕ್ಷಣಕ್ಕೆ  ಏನಾಗುತ್ತಿದೆಯೆಂದೇ  ಗೊತ್ತಾಗಲಿಲ್ಲ  ಧನಂಜಯನಿಗೆ. ಲಗುಬಗೆಯಿಂದ   ಸ್ವಾತಿಯ ನಂಬರ್ಗೆ ಮತ್ತೆ  ಫೋನ್  ಮಾಡಿದ, ಆದರೆ  ಅವಳ ನಂಬರ್ ಸ್ವಿಚ್ ಆಫ್  ಆಗಿತ್ತು. ನಿದ್ದೆಯ ಮಂಪರಿನಲ್ಲಿದ್ದವನ  ನಿದ್ದೆ ಒಮ್ಮೆಲೇ ಹಾರಿಹೋಯಿತು. ಪಕ್ಕದಲ್ಲಿದ್ದ  ಗಡಿಯಾರ ನೋಡಿದ.  ಬೆಳಗಿನ ಆರುಗಂಟೆ. ಮತ್ತೆ ಮತ್ತೆ ಫೋನ್ ಮಾಡಿ ನೋಡಿದನಾದರೂ ಆಕೆಯ  ಫೋನ್  ಸ್ವಿಚ್  ಆಫ್  ಸ್ಥಿತಿಯಿಂದ  ಹೊರ ಬಂದಿರಲಿಲ್ಲ. ಪದೇ ಪದೇ 'ಸ್ವಿಚ್ ಆಫ