ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾಭಾರತ ಕಥಾ

ಇಮೇಜ್
            'ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ' ಎಂದು ಆರಂಭವಾಗಿ ' ಸಂಭವಾಮಿ ಯುಗೇ ಯುಗೇ....' ಎಂದು ಮುಗಿಯುತ್ತಿದ್ದ ಮಹೇಂದ್ರ ಕಪೂರ್ ಅವರ ಧ್ವನಿಯಲ್ಲಿದ್ದ  ಗೀತೆಯೊಂದಿಗೆ ಪ್ರಾರಂಭವಾಗುತ್ತಿದ್ದ 'ಮಹಾಭಾರತ' ಹಿಂದಿ ಧಾರಾವಾಹಿ 1988ರ ಹೊತ್ತಿಗೆ ದೇಶದಾದ್ಯಂತ ಜನಪ್ರಿಯವಾಗಿತ್ತು. ವ್ಯಾಸರ ಮಹಾಭಾರತವನ್ನಾಧರಿಸಿಯೇ ಮೂಡಿ ಬಂದಿದ್ದ ಧಾರಾವಾಹಿ ಅದು.  ಸುಮಾರು 2 ವರ್ಷಗಳ ಕಾಲ 94 ಎಪಿಸೋಡ್ಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿ ಆ ದಿನಗಳಲ್ಲಿ ಅತ್ಯಂತ  ಹೆಚ್ಚು ಟಿ ಆರ್ ಪಿ ಗಳಿಸಿದ ಹೆಮ್ಮೆ ಹೊಂದಿತ್ತು.  ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ರಸ್ತೆಗಳೆಲ್ಲ ಖಾಲಿಯಿರುತ್ತಿದ್ದವಂತೆ ಎಂದರೆ ಅದರ ಜನಪ್ರಿಯತೆ ಎಷ್ಟಿತ್ತು ಎಂದು ತಿಳಿಯಬಹುದು. ನಮಗೆಲ್ಲ ಟಿ ವಿ ಎಂಬುದು ಒಂದು ಮಾಯಾಪೆಟ್ಟಿಗೆಯಾಗಿ, ಸುಲಭವಾಗಿ ಕೈಗೆಟುಕದ ವಸ್ತುವಾಗಿದ್ದ ಕಾಲ ಅದು. ನನ್ನೂರಿನಲ್ಲೆಲ್ಲೂ ಟಿ ವಿ ಇರಲಿಲ್ಲ. ನಂತರದ ದಿನಗಳಲ್ಲಿ ಧಾರವಾಹಿಯ ಬಗ್ಗೆ ಕೇಳಿ ಕುತೂಹಲಿಯಾಗಿದ್ದ ನಾನು ನೋಡಬೇಕೆಂದುಕೊಂಡಿದ್ದೆ . ಈಗ ಸಂಪೂರ್ಣ ಧಾರವಾಹಿಯ ಎಂಟು ಡಿವಿಡಿಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ' ಮಹಾಭಾರತ' ಧಾರಾವಾಹಿ ಒಂದು ಅದ್ಭುತ ನಿರ್ಮಾಣ ಎನ್ನಿಸುತ್ತಿದೆ.             ಈ ಧಾರಾವಾಹಿ ಹಾಗೂ ರಮಾನಂದ ಸಾಗರ್ ಅವರ ರಾಮಾಯಣ ಇವೆರಡೂ ನಿರ್ಮಾಣವಾಗಲು ರಾಜೀವ್ ಗಾಂಧಿ ಕಾರಣ ಎಂಬ ಅಂತರ್ಜಾಲದ ಬರಹವೊಂದನ್ನು ಓ

ಪ್ರವಾಹ ನದಿಯಲ್ಲ. ...

ಸೊಕ್ಕಿನಲಿ  ಉತ್ಕಂಟ ಕಿರುಚಾಟ ಮಾಡುತ್ತ ಮೈ ತುಂಬಿ ಮುನ್ನಡೆದು ಶರವೇಗದಿಂದುರುಳಿ ಪಥದಿ ಸಿಕ್ಕೆಲ್ಲವನು ದಯೆಯಿಲ್ಲದೆಳೆದೊಯ್ದು ಪ್ರತಿಯೊಬ್ಬರೆದೆಯಲ್ಲು ಭಯ ಭೀತಿಗಳ ಬಿತ್ತಿ ಸಾಗುವ ಪ್ರವಾಹ ನದಿಯಲ್ಲ.... ಈಗ ಅಳಿದೇನೆಂಬ ಅರಿವೆಯೇ ಇಲ್ಲದೆ ಅಳಿಸುತ್ತಿರುವೆ ಎಂಬ ಕಲ್ಪನೆಯು ಇಲ್ಲದೆ ಒಡಲಲ್ಲಿ ಕಸಕಡ್ಡಿ ವ್ಯರ್ಥವನೆ ಒಯ್ಯುತ್ತ ವಿನಾಶಕ್ಕಿಂತ ಹೆಚ್ಚೇನು ಸಾಧಿಸದೆ ಸಾಗುವ ಪ್ರವಾಹ ನದಿಯಲ್ಲ.... ತನ್ನನ್ನೆ ಆಧರಿಸಿ ತನ್ನನ್ನೆ ಸತ್ಕರಿಸಿ ತನ್ನನ್ನೆ ನಂಬಿ ಕನಸುಳ ಕಟ್ಟಿ ಬಾಳ್ವೆಯಲಿ ಸಾಗಿರುವ ಜನರ ಕಣ್ಣುಗಳಲ್ಲಿ ಶೋಕ ವಿಷಾದ ಸಂಕಟವ ತುಂಬುತ್ತ ಸಾಗುವ ಪ್ರವಾಹ ನದಿಯಲ್ಲ. ... ಜೀವ ಜಲವನು ನೀಡಿ ಜೀವಿ ಸಂಕುಲಕೆಲ್ಲ ತನ್ನ ಪಾತ್ರವನೆಲ್ಲ ಫಲಪೂರ್ಣ ಮಾಡಿ ಕೊನೆ ಸೇರುವಲ್ಲಿ ಧನ್ಯತೆಯ ತಳೆಯುವ ಶಾಂತ ನದಿ ಕ್ಷಣಕಾಲ ಉನ್ಮತ್ತವಾಗಿ ಸಾಗುವ ಪ್ರವಾಹ ನದಿಯಲ್ಲ. ...

ಹೆಣಗಾಟ...

ಸುತ್ತಮುತ್ತಲು ದಟ್ಟ ಕತ್ತಲು ಮೌನ ತಬ್ಬಿದೆ ಇರುಳನು ಜೀರಿಡುವ ಜೀರುಂಡೆ ಕರ್ಕಶ ಕೊಯ್ಯುತಿದೆ ಮೌನದ ಕೊರಳನು ಅಜ್ಞಾತವಾಗಿಹ ಕದವ ತೆರೆದು ಮನದೊಳಗೆ ಕೋಲಾಹಲ ಮರೆತೆ ಹೋದ ನೆನಪುಗಳಿಗೆ ಹೊರಬಂದು ಕಾಡುವ ಹಂಬಲ ಭಯವ ಬಿತ್ತಿ ನನ್ನ ಎದೆಯ ನಡುಕ ನೋಡಲು ಏಕೆ ಕಾತುರ? ಕಾಣೆಯಾದ ಹಳೆಯ ಕ್ಷಣಗಳ ಕಣ್ಮುಂದೆ ತರುವಿರಿ ಏತಕೀತರ? ನನ್ನೆದೆಯ ಒಳಗೆ ದೀಪ ಹಚ್ಚಿ ಬೆಳಕ ತರಲು ಹೆಣಗುತಿರುವೆ ಕತ್ತಲೆಯ ಹೊಮ್ಮಿಸಿ ನನ್ನ ಈ ತರ ಸಂಕಟಕೆ ಎಳೆವುದು ನಿಮಗೆ ತರವೇ?

ಚಿಗುರಿದಾಗ. ...

ನೀನು ಹೇಳಲೆ ಇಲ್ಲ ನಾನು ಕೇಳಲೆ ಇಲ್ಲ ಆದರೂ ಚಿಗುರಿಹುದು ಈ ಪ್ರೀತಿಯು ಅದು ನಿನಗು ತಿಳಿದಿಹುದು ನನಗದರ ಅರಿವಿಹುದು ನೋಡೆಂತ ವೈಚಿತ್ರ್ಯ ಈ ರೀತಿಯು. ಮಾತುಗಳು ಇದ್ದರೂ ಇದರ ಸುದ್ದಿಯೆ ಇಲ್ಲ ಏನೇನೋ ಮಾತಾಡಿ ಹೊತ್ತು ಕಳೆದ್ಹೋಯ್ತು. ಅರ್ಥವಿಲ್ಲದ ಮಾತ ಹಿಂದಿರುವ ಗೂಢಾರ್ಥ ಪ್ರೀತಿಯೆಂಬ ವಿಷಯ ತಾನೆ ಅರಿವಾಯ್ತು. ಮನಸ ಈ ಭಾವನೆಗೆ ಪದಗಳೇತಕೆ ಹೇಳು ಮೌನವೆ ಎಲ್ಲವನು ಹೇಳುತಿರುವಾಗ ನಿನ್ನ ಹೃದಯದ ನುಡಿಯು ನನ್ನ ಹೃದಯವ ತಾಕಿ ಕುಶಲ ಸಂಭಾಷಣೆಯ ಮಾಡುತಿರುವಾಗ ಭಾವನೆಯ ಕಂಡು ನೀ ಭಯಪಡುವುದೇತಕ್ಕೆ ಅದು ದಿವ್ಯ, ಅದು ರಮ್ಯ ಇರಲಿ ಬಿಡು ಹಾಗೆ. ಇಂದಿನ ಚಿಗುರು ನಾಳೆ ಮರವಾದಾಗ ಕೀಳಲಾಗದು ಅದನು ಸುಲಭದಲಿ ಹೀಗೆ ನಾವು ಪೋಷಿಸಬೇಕು ಅದು ಮರವಾಗುವಂತೆ ಆಮೇಲೆ ಅದು ಅಮರವಾಗುವಂತೆ

ಮತ್ತೆ ಪರಿತಾಪವೊಂದೇ......

ಹೊತ್ತು ಮುಳುಗುವ ಮುನ್ನ ಮಾಡಿಬಿಡು ಕೆಲಸಗಳ ಇಲ್ಲದಿದ್ದರೆ ಮತ್ತೆ ಅವಕಾಶ ಸಿಗದು ತಂದೆ ತಾಯ್ಗಳ ಸೇವೆ ಇಂದೆ ನೀ ಮಾಡು ನಾಳೆ ನಿನಗಾ ಭಾಗ್ಯ ಸಿಗುವ ಭರವಸೆಯಿಲ್ಲ. ಗರ್ಭದಲಿ ನೀನಿರುವೆ ಎಂದು ತಿಳಿದಾ ಕ್ಷಣವೆ ಮುಡಿಪಿಟ್ಟರು ತಮ್ಮ ಬಾಳು ನಿನಗಾಗಿ ಅವರ ಮನಸು ಹಾಗು ಹಲವು ಕನಸುಗಳೆಲ್ಲ ನಿನ್ನ ಏಳಿಗೆಗಾಗಿ, ನಿನ್ನ ಜೀವಿತಕಾಗಿ ನೂರು ಸಾಲದ ಹೊರೆಯು ನಿನ್ನ ಶಿಕ್ಷಣಕಾಗಿ ಬಾಗಿ ಬೇಡಿತು ಕೈಯಿ ನಿನ್ನ ರಕ್ಷಣೆಗಾಗಿ ಗಡಿಬಿಡಿಯ ನಡುವೆ ನೀ ನೆನೆ ಅದನು ಕ್ಷಣ ಹೊತ್ತು ತುಂಬಿ ಬಂದರೆ ಹೃದಯ ಚೆನ್ನಾಯ್ತು ಗೆಳೆಯ ನಿನ್ನ ಬಾಲ್ಯದ ಆಟ, ಜೊತೆಗೆ ಎಷ್ಟೊಂದು ಹಠ! ಪ್ರೀತಿಯಲಿ ಸಹಿಸಿದರು ಅವರು ಅದನೆಲ್ಲ ನಿನ್ನ ಬೇಡಿಕೆಗಳು ಅವರ ಕೈಗೆಟುಕದಿರೆ ಅವರ ಕಣ್ಣೀರು ನಿನಗೆ ಕಾಣಲೆ ಇಲ್ಲ ಇಂದು ನೀ ನಿಂತಿರುವೆ ನಿನ್ನ ಕಾಲ್ಗಳ ಮೇಲೆ ಅವರ ಕಾಲ್ಗಳ ನೋಡು ಎಷ್ಟು ಬಲಹೀನ ಗೊಡ್ಡು ಜೀವಗಳೆಂದು ದೂರ ತಳ್ಳಲು ಬೇಡ ಅವರ ಆ ವೃದ್ದಾಪ್ಯ ನಾಳೆ ನಿನಗೂ ಇಹುದು ಕಣ್ಣು ಕಾಣುವುದಿಲ್ಲ, ಕಿವಿಯು ಕೇಳುವುದಿಲ್ಲ ಜರ್ಜರಿತ, ನಿಶ್ಯಕ್ತ,ಸೊರಗಿರುವ ದೇಹ ಕೈಸಾಗದಾ ಹೊತ್ತು, ಜೀರ್ಣವಾಗದು ತುತ್ತು ಇದ ನೋಡಿ ನೋಡದಂತಿರಬೇಡ ನೀನು ಮುದಿತನದಿ ಬಯಸುವರು ನಿನ್ನ ಆಸರೆಯನ್ನು ಮನದಲ್ಲೆ ಗೊಣಗೊಣಗಿ ಕುದಿಯಬೇಡ ನಿನ್ನ ಜೀವನ ಅವರು ನಿನಗೆ ಕೊಟ್ಟಿರುವ ವರ ನಿನಗೆ ಶಾಪವೆ ಹೌದು ಅವರ ಕಣ್ಣೀರು ಕೈ ಹಿಡಿದು ನಡೆಸು, ಕಾಲ್ಮುಟ್ಟಿ ನಮಿಸು ಅವರ ಸೇವೆಯ ಭಾಗ್ಯ ನಿನಗೆ ದೊ

ಮನವಿ ನಿನಗೆ......

ಇಮೇಜ್
ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸುವ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?