ಪ್ರವಾಹ ನದಿಯಲ್ಲ. ...

ಸೊಕ್ಕಿನಲಿ  ಉತ್ಕಂಟ ಕಿರುಚಾಟ ಮಾಡುತ್ತ
ಮೈ ತುಂಬಿ ಮುನ್ನಡೆದು ಶರವೇಗದಿಂದುರುಳಿ
ಪಥದಿ ಸಿಕ್ಕೆಲ್ಲವನು ದಯೆಯಿಲ್ಲದೆಳೆದೊಯ್ದು
ಪ್ರತಿಯೊಬ್ಬರೆದೆಯಲ್ಲು ಭಯ ಭೀತಿಗಳ ಬಿತ್ತಿ
ಸಾಗುವ ಪ್ರವಾಹ ನದಿಯಲ್ಲ....
ಈಗ ಅಳಿದೇನೆಂಬ ಅರಿವೆಯೇ ಇಲ್ಲದೆ
ಅಳಿಸುತ್ತಿರುವೆ ಎಂಬ ಕಲ್ಪನೆಯು ಇಲ್ಲದೆ
ಒಡಲಲ್ಲಿ ಕಸಕಡ್ಡಿ ವ್ಯರ್ಥವನೆ ಒಯ್ಯುತ್ತ
ವಿನಾಶಕ್ಕಿಂತ ಹೆಚ್ಚೇನು ಸಾಧಿಸದೆ
ಸಾಗುವ ಪ್ರವಾಹ ನದಿಯಲ್ಲ....
ತನ್ನನ್ನೆ ಆಧರಿಸಿ ತನ್ನನ್ನೆ ಸತ್ಕರಿಸಿ
ತನ್ನನ್ನೆ ನಂಬಿ ಕನಸುಳ ಕಟ್ಟಿ
ಬಾಳ್ವೆಯಲಿ ಸಾಗಿರುವ ಜನರ ಕಣ್ಣುಗಳಲ್ಲಿ
ಶೋಕ ವಿಷಾದ ಸಂಕಟವ ತುಂಬುತ್ತ
ಸಾಗುವ ಪ್ರವಾಹ ನದಿಯಲ್ಲ. ...
ಜೀವ ಜಲವನು ನೀಡಿ ಜೀವಿ ಸಂಕುಲಕೆಲ್ಲ
ತನ್ನ ಪಾತ್ರವನೆಲ್ಲ ಫಲಪೂರ್ಣ ಮಾಡಿ
ಕೊನೆ ಸೇರುವಲ್ಲಿ ಧನ್ಯತೆಯ ತಳೆಯುವ
ಶಾಂತ ನದಿ ಕ್ಷಣಕಾಲ ಉನ್ಮತ್ತವಾಗಿ
ಸಾಗುವ ಪ್ರವಾಹ ನದಿಯಲ್ಲ. ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?