ಹೆಣಗಾಟ...

ಸುತ್ತಮುತ್ತಲು ದಟ್ಟ ಕತ್ತಲು
ಮೌನ ತಬ್ಬಿದೆ ಇರುಳನು
ಜೀರಿಡುವ ಜೀರುಂಡೆ ಕರ್ಕಶ
ಕೊಯ್ಯುತಿದೆ ಮೌನದ ಕೊರಳನು

ಅಜ್ಞಾತವಾಗಿಹ ಕದವ ತೆರೆದು
ಮನದೊಳಗೆ ಕೋಲಾಹಲ
ಮರೆತೆ ಹೋದ ನೆನಪುಗಳಿಗೆ
ಹೊರಬಂದು ಕಾಡುವ ಹಂಬಲ

ಭಯವ ಬಿತ್ತಿ ನನ್ನ ಎದೆಯ
ನಡುಕ ನೋಡಲು ಏಕೆ ಕಾತುರ?
ಕಾಣೆಯಾದ ಹಳೆಯ ಕ್ಷಣಗಳ
ಕಣ್ಮುಂದೆ ತರುವಿರಿ ಏತಕೀತರ?

ನನ್ನೆದೆಯ ಒಳಗೆ ದೀಪ ಹಚ್ಚಿ
ಬೆಳಕ ತರಲು ಹೆಣಗುತಿರುವೆ
ಕತ್ತಲೆಯ ಹೊಮ್ಮಿಸಿ ನನ್ನ ಈ ತರ
ಸಂಕಟಕೆ ಎಳೆವುದು ನಿಮಗೆ ತರವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?