ಚಿಗುರಿದಾಗ. ...

ನೀನು ಹೇಳಲೆ ಇಲ್ಲ
ನಾನು ಕೇಳಲೆ ಇಲ್ಲ
ಆದರೂ ಚಿಗುರಿಹುದು ಈ ಪ್ರೀತಿಯು
ಅದು ನಿನಗು ತಿಳಿದಿಹುದು
ನನಗದರ ಅರಿವಿಹುದು
ನೋಡೆಂತ ವೈಚಿತ್ರ್ಯ ಈ ರೀತಿಯು.

ಮಾತುಗಳು ಇದ್ದರೂ ಇದರ ಸುದ್ದಿಯೆ ಇಲ್ಲ
ಏನೇನೋ ಮಾತಾಡಿ ಹೊತ್ತು ಕಳೆದ್ಹೋಯ್ತು.
ಅರ್ಥವಿಲ್ಲದ ಮಾತ ಹಿಂದಿರುವ ಗೂಢಾರ್ಥ
ಪ್ರೀತಿಯೆಂಬ ವಿಷಯ ತಾನೆ ಅರಿವಾಯ್ತು.

ಮನಸ ಈ ಭಾವನೆಗೆ ಪದಗಳೇತಕೆ ಹೇಳು
ಮೌನವೆ ಎಲ್ಲವನು ಹೇಳುತಿರುವಾಗ
ನಿನ್ನ ಹೃದಯದ ನುಡಿಯು ನನ್ನ ಹೃದಯವ ತಾಕಿ
ಕುಶಲ ಸಂಭಾಷಣೆಯ ಮಾಡುತಿರುವಾಗ

ಭಾವನೆಯ ಕಂಡು ನೀ ಭಯಪಡುವುದೇತಕ್ಕೆ
ಅದು ದಿವ್ಯ, ಅದು ರಮ್ಯ ಇರಲಿ ಬಿಡು ಹಾಗೆ.
ಇಂದಿನ ಚಿಗುರು ನಾಳೆ ಮರವಾದಾಗ
ಕೀಳಲಾಗದು ಅದನು ಸುಲಭದಲಿ ಹೀಗೆ

ನಾವು ಪೋಷಿಸಬೇಕು ಅದು ಮರವಾಗುವಂತೆ
ಆಮೇಲೆ ಅದು ಅಮರವಾಗುವಂತೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )