ಪೋಸ್ಟ್‌ಗಳು

ಒಳಗುಟ್ಟು......

ಆ ಅಮೃತ ಬಿಂದು ಮುಗಿಲಿಂದ ಬಂದು ಇಳೆ ಒಡಲ ಸೇರಿ ಹೋಯ್ತು. ಬೆಂದೊಡಲ ತಾಕಿ ದೈನ್ಯವನು ನೂಕಿ ಎಲ್ಲೆಲ್ಲವು ಹಸಿರಾಯ್ತು. ಇದು ಎಂಥ ನೀತಿ? ವೈಚಿತ್ರ್ಯ ರೀತಿ! ಹಸಿರಲ್ಲ ನೀರ ಬಣ್ಣ. ಭುವಿಯಿಂದ ಮಾತ್ರ ಚಿಗುರುವುದು ಹಸಿರು ತುಂಬುವುದು ನನ್ನ ಕಣ್ಣ. ಇರಬಹುದು ಹೀಗೆ, ಜಲಧಾರೆ ತಾನು ಇಳೆ ತಬ್ಬಿ ಹಬ್ಬಿದಾಗ, ಒಳಗೊಳಗೆ ಪುಳಕಗೊ ಳ್ಳುತಲಿ ಭುವಿಯು ಹಸಿರನ್ನೇ ಹೇರುವುದಾಗ. ಜಲವೇ ಒಂದು ನೆಲೆ ,ಭುವಿಯೇ ಬೇರೆ ಸೆಲೆ ಭಿನ್ನ ಒಂದು ಮತ್ತೊಂದರಿಂದ. ಹೊಸ ಜೀವವೊಂದು ಹೊಮ್ಮುವುದು ಇಲ್ಲಿ ಪ್ರೇಮಪೂರ್ಣ ಸಮ್ಮಿಲನದಿಂದ.

ಯಾರೂ ಓದದ ಪುಸ್ತಕ.

ರಾಶಿ ರಾಶಿ ಪುಸ್ತಕಗಳ ನಡುವೆ , ಪ್ರತೀ ಪುಸ್ತಕ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುವ ಆ ಪುಸ್ತಕ . ಯಾರೊಬ್ಬರೂ ಪುಟ ತಿರುಗಿಸದೆ , ಬಂದಂತೆ , ತಂದಂತೆ , ಇದ್ದು ಎದ್ದು ಹೋಗುವ , ಯಾರೂ ಓದದ ಪುಸ್ತಕ . ಗರ್ಭದಿಂದ ಜೀವವೊಂದು ಜಾರುವಂತೆ , ಮುದ್ರಣಗೊಂಡು ಅದು ಬಂದದ್ದು ' ಪುಸ್ತಕಲೋಕ '. ದಪ್ಪವೆನಿಲ್ಲ , ಬಣ್ಣ ಚಿತ್ತಾರಗಳೂ ಇಲ್ಲ ಎಂದು ಹೇಳಲು ಓದಿದವರಾರೂ ಇಲ್ಲ . ಮಾಸಲು ಬಣ್ಣಕ್ಕೆ ತಿರುಗಿದ ಪುಸ್ತಕದ ಒಳ ಪುಟಗಳು ಹೇಗಿವೆಯೋ ಗೊತ್ತಿಲ್ಲ . ಸದ್ದು ಗದ್ದಲವಿಲ್ಲದೆ ಬಂದು ಕುಳಿತ ಅದು ಹೋದದ್ದೂ ಗೊತ್ತಿರುವುದಿಲ್ಲ . ಯಾವ ದೊಡ್ಡ ದೊಡ್ಡ ಹೆಸರುಗಳೂ ಕಾಣುವುದಿಲ್ಲ . ಚುಚ್ಚುಮದ್ದು ಹಾಕಿಸಿಕೊಳ್ಳದ ಮಗುವಿನಂತೆ ಕಿಲಕಿಲ ನಗುತ್ತಿರುತ್ತದೆ . ರೋಗಗ್ರಸ್ತ ವದ್ಯರು ಗಮನಿಸಿರುವುದಿಲ್ಲ . ನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ . ನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ . ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ . ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು ಎನ್ನುವ ಭಯದಿಂದ , ತಕ್ಷಣ ಎತ್ತಿಕೊಳ್ಳುತ್ತೇನೆ .

ಕಳೆದು ಹೋಗದಂತೆ.

24ನೇ ತಾರೀಕು ಅಯೋಧ್ಯೆಯ ವಿವಾದದ ಬಗ್ಗೆ ಅಲಹಾಬಾದ್ ನ್ಯಾಯಾಲಯ ತನ್ನ ತೀರ್ಪನ್ನು ನೀಡಲಿದೆ. ಅರವತ್ತು ವರ್ಷಗಳಷ್ಟು ಹಿಂದಿನ ವಿವಾದವೊಂದು ಇಡೀ ಭಾರತವನ್ನೆ ತನ್ನತ್ತ ಸೆಳೆಯುತ್ತಿದೆ. ತೀಪರ್ು ಯಾರ ಕಡೆಗೆ ಬರಬಹುದು ಎನ್ನುವ ಕುತೂಹಲಕ್ಕಿಂತ, ಏನೇ ತೀಪರ್ು ಬಂದರೂ ಹಿಇಂಸಾಚಾರ ತಪ್ಪಿದ್ದಲ್ಲ ಎನ್ನುವ ಸತ್ಯ ಜನರನ್ನು ಚಿಂತಿತರನ್ನಾಗಿಸಿದೆ. ಭಾರತದ ಸುಪ್ರಸಿದ್ದ ಮಹಾಕಾವ್ಯ ರಾಮಾಯಣದ ಕೇಂದ್ರಬಿಂಧು ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ. ಆ ಅಯೊಧ್ಯೆಯಲ್ಲಿ ಶ್ರೀ ರಾಮಮಂದಿರವೊಂದಿತ್ತು. ಕಾಲಾನಂತರ ಮುಘಲ್ ದೊರೆ ಬಾಬರ್, ಮುಸ್ಲಿಂ ಫಕೀರನೊಬ್ಬನ ಆಸೆಯಂತೆ ಆ ಮಂದಿರವನ್ನು ನಾಶ ಮಾಡಿ, ಅಲ್ಲಿ ಮಸೀದಿಯೊಂದನ್ನು ನಿಮರ್ಿಸಿದ. ಆ ಜಾಡಿನಲ್ಲೆ ಸಾಗಿ ಡಿಸೆಂಬರ್-1992ರಲ್ಲಿ ಕಾರಸೇವಕರು ಆ ಬಾಬರೀ ಮಸೀದಿಯನ್ನು ಧ್ವಂಸಗೊಳಿಸಿದ. ಇದು ಇಲ್ಲಿಯವರೆಗೆ ತಿಲಿದಿರುವ ಸಂಕ್ಷಿಪ್ತ ಇತಿಹಾಸ. ನನಗನ್ನಿಸುತ್ತದೆ, ವಂಶವಾಹಿಗಳ ಮೂಲಕ ಸಾಮುದಾಯಿಕ ಭಾವನೆಗಳೂ ತಲೆಮಾರಿನಿಂದ ತಲೆಮಾರಿಗೆ ವಗರ್ಾವಣೆಯಾಗುತ್ತದೆ.ಬಾಬರ್ನ ಕೃತ್ಯದ ಪರಿಣಾಮವಾಗಿ ಜನರಲ್ಲಿ ಹುಟ್ಟಿದ ದ್ವೇಷ ಐದುನೋರು ವರ್ಷಗಳ ನಂತರ ಮಸೀದಿಯ ಧಂಸಕ್ಕೆ ಕಾರಣವಾಯಿತು. ಹಾಗೆಯೇ ಮಸೀಧಿ ಧ್ವಂಸದ ಪರಿಣಾಮ ಇನ್ನೆಲ್ಲಿಗೆ ಸಾಗುತ್ತದೆ? ಇನ್ನೊಂದು ದಿನ ಅದು ವ್ಯಕ್ತಗೊಳ್ಳಲೇಬೇಕು. ಇನ್ನೊಂದು ದಿನ ಅದು ವ್ಯಕ್ತಗೊಳ್ಳುವುದು ಧ್ವಂಸ ಮಾಡುವ ಮೂಲಕವೆ. ಇಂತಹ ಅರ್ಥಹೀನ

ದೇಶವಲ್ಲ, ಮಾತೆ ಆಗಬೇಕು

ಇಮೇಜ್
             ಯಾವ ದೇಶದಲ್ಲಿ ಹಿಂದಿನ ತಲೆಮಾರಿನವರ ಸಂಸ್ಮರಣೆ ಇರುವುದಿಲ್ಲವೋ, ಆ ದೇಶದಲ್ಲಿ ವರ್ತಮಾನವೂ,ಭವಿಷ್ಯವೂ ಆಶಾದಾಯಕವಾಗಿರುವುದಿಲ್ಲ. ಏಕೆಂದರೆ ಅವರು ಪಡೆದುಕೊಂಡಿರುವುದೆಲ್ಲ ತಮ್ಮ ಹಿಂದಿನ ತಲೆಮಾರಿನವರು ನೀಡಿರುವುದನ್ನೆ. ಈಮಾತು ನಮ್ಮ ದೇಶಕ್ಕೂ ಅನ್ವಯಿಸುತ್ತದೆ. 9ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ Little Martyr ಎಂಬ ಪಾಠ ಇದೆ. ಹುಬ್ಬಳ್ಳಿಯ ನಾರಾಯಣ ಮಹಾದೇವ ಢೋಣಿ ಎನ್ನುವ 13ವರ್ಷದ ಹುಡುಗನೊಬ್ಬ,"ಕ್ವಿಟ್ ಇಂಡಿಯಾ" ಚಳುವಳಿಯ ಸಮಯದಲ್ಲಿ ಬ್ರಿಟೀಷರ ಗುಂಡಿಗೆ ಬಲಿಯಾದ ಕರುಣಾಜನಕ ಕಥೆ ಅದು. ನಮ್ಮ ದೇಶ ಸ್ವಾತಂತ್ರಕ್ಕಾಗಿ ನಡೆಸಿದ ಸುದೀರ್ಘ ಹೋರಾಟದಲ್ಲಿ ಇಂತಹ ಅದೆಷ್ಟು ಅಮಾಯಕರು ಪ್ರಾಣ ನೀಡಿರಬಹುದು? ಲೆಕ್ಕ ಇದೆಯೆ? ಸ್ವಾತಂತ್ರ್ಯ ಹೋರಾಟದ ನಂತರದ ದಿನಗಳಲ್ಲಿ ಭೂಮಿಯ ಮೇಲಿರುವ ನಮಗೆ, ಆ ದಿನಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಕೋಟಲೆಗಳ, ನೋವಿನ ಮಹತ್ವದ ಕಿಂಚಿತ್ತಾದರೂ ಅರಿವು ಇದೆಯ? ಇವತ್ತಿನ ಪರಿಸ್ತಿತಿಯನ್ನು ಗಮನಿಸಿದಾಗ ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.                  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಘಟನಾತ್ಮಕ ಹೋರಾಟ ಬ್ರಿಟೀಷರ ವಿರುದ್ದ ನಡೆಯುತ್ತಲೇ ಇತ್ತು. ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆಯವರುಗಳು ಭಾರತವನ್ನು ಮಹಾ ಹೋರಾಟವೊಂದಕ್ಕೆ ಸಜ್ಜುಗೊಳಿಸುತ್ತಲೆ ಇದ್ದರು..ಗಾಂಧೀಜಿಯವರ ಆಗಮನದಿಂದ ಹೋರಾಟ ವ್

ಹೇಳು.

ತೇಲುವ ಮೇಘದ ಮೇಗಡೆಯೆಲ್ಲೋ ಅಡಗಿಹೆಯಾ ನೀನು? ನೀ ಹನಿಯಾಗಿ ಇಳಿಯುವೆಯೆಂದು ಕಾಯುತಿಹೆ ನಾನು. ನೀ ಸೂಸಿದರೆ ಹೂನಗೆಯನ್ನು ಹೂವಿಗೂ ನಗುವುಂಟು, ನಿನ್ನಯ ಕಂಗಳ ಬೆಳಕನು ಕಂಡರೆ ರವಿಗೂ ಹೊಳಪುಂಟು. ನಿನ್ನಯ ದನಿಯ ಮಧುರತೆಯೆದುರು ಕೋಗಿಲೆಗೆಣೆಯುಂಟೆ? ನನ್ನೀ ಕಲ್ಪನೆ ಹಿಂದೆ ತುಂಬಿಹ ಪ್ರೀತಿಗೆ ಕೊನೆಯುಂಟೆ?

ಎದೆಯಾಳದಿಂದ......

ತಡಕಾಡಿ ಪದಗಳಿಗೆ ಬರೆದೆ ಈ ಕವನ . ತಡೆ ತಡೆದು ಹೊಸತೊಂದು ಭಾವ ಸ್ಪುರಣ . ಸಂತಸದ ಮತ್ತಿನಲಿ ಹೆಚ್ಚೇನು ಹೇಳಲಿ ? ಹೇಳು , ನೀ ಎಂದು ಬರುವೆ ನನ್ನೀ ಬಾಳಲಿ ? ಹೇಳುವರು ಅವರು ನೀ ನನ್ನಲೊಂದು ಬಹು ಹಳೆಯಕಾಲದಿಂದ, ಮುಂದೂನು ಹೀಗೆ ಇರುವುದಂತೆ ಈ ನಮ್ಮ ಸಂಬಂಧ. ಆ ಹಿಂದೂ ಮುಂದು ನನಗೀಗ ಬೇಡ ,ನಾ ಕಾಣಲಿಲ್ಲವಲ್ಲ! ಈ ದಿನವೇ ಸತ್ಯ ,ಅದರಲ್ಲೇ ನಿತ್ಯ ನನ್ನ ಪ್ರತೀಕ್ಷೆಯೆಲ್ಲ. ನೀನೆಲ್ಲೇ ಇರಲಿ,ನೀ ಹೇಗೆ ಇರಲಿ ನನಗಿಲ್ಲ ಅದರ ಚಿಂತೆ, ಕಪ್ಪಾದರೇನು? ಬಿಳುಪಾದರೇನು? ಒಂದೊಂದು ಬಣ್ಣದಂತೆ. ಕೊಟ್ಟಾದಮೇಲೆ ಮನಸನ್ನು ನಿನಗೆ ಕಿತ್ತಿಡಲು ಸಾಧ್ಯವೇನು? ಮನದಲ್ಲೇ ಹೀಗೆ ಬಿಕನಾಸಿಯೆಂದು ನೀ ನನ್ನ ತಿಳಿದೆಯೇನು? ಹೇಳುವೆನು ಕೇಳು ನಾ ಇಲ್ಲೇ ಹೀಗೆ ಮಾತಲ್ಲ ನನ್ನ ಗೀಳು. ಕೈ ಹಿಡಿದ ಮೇಲೆ ಬಿಡಲಾರೆ ನಾನು ಕೊನೆವರೆಗೂ ಜೋಡಿ ಬಾಳು. ಕೇಳುವೆನು ನಾನು ನಿನ್ನಲ್ಲಿ ಒಂದು ತಪ್ಪೇನು ಇಲ್ಲ ತಾನೇ? ಬರುವವಳೇ ನೀನು ಆಗಿರಲೆಬೇಕು ಬಂಗಾರಗುಣದ ಕನ್ಯೆ.

ಭ್ರಾಂತ ಏಕಾಂತ

ಕತ್ತಲ ರಾತ್ರಿಯ ನೀರವ ಮೌನದಿ ನೆನಪಾಗಿಹೆ ನೀನು. ಕಣ್ಣನು ಮುಚ್ಚಲು ಮೌನವ ಸೀಳಿ ನುಡಿಯುವೆ ಏನೇನೋ. ಕಂಠದ ಮಧುರತೆ ಮತ್ತೇರಿಸುತಿದೆ, ತೇಲುತಿಹೆ ನಾನು. ಎದುರಿಗೆ ಬಾರದೆ ಕಾಡುವೆ ಹೀಗೆ ,ಕಾರಣ ಹೇಳಿನ್ನು. ಕಣ್ಣನು ಮುಚ್ಚಲು ನನ್ನೆಡೆ ಬಂದು ಸೂಸುವೆ ಹೂ ನಗೆಯ, ಕಣ್ಣಲೆ ಹೇಳುವೆ ನೋಡುತ ನನ್ನನೆ ಏನೋ ಭಾವನೆಯ. ಭಾವನೆ ಅರ್ಥವ ಅರಿಯಲಾಗದೆ ನಾ ಪದುತಿಹೆ ಯಾತನೆಯ, ಕರೆಯಲೇ, ನಿನ್ನನು ಭ್ರಾಂತಿಯ ತುಂಬಿ ಕಾಡುತಿಹ ಮಾಯಾ?