ಮಹಾಭಾರತ ಕಥಾ
'ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ' ಎಂದು ಆರಂಭವಾಗಿ ' ಸಂಭವಾಮಿ ಯುಗೇ ಯುಗೇ....' ಎಂದು ಮುಗಿಯುತ್ತಿದ್ದ ಮಹೇಂದ್ರ ಕಪೂರ್ ಅವರ ಧ್ವನಿಯಲ್ಲಿದ್ದ ಗೀತೆಯೊಂದಿಗೆ ಪ್ರಾರಂಭವಾಗುತ್ತಿದ್ದ 'ಮಹಾಭಾರತ' ಹಿಂದಿ ಧಾರಾವಾಹಿ 1988ರ ಹೊತ್ತಿಗೆ ದೇಶದಾದ್ಯಂತ ಜನಪ್ರಿಯವಾಗಿತ್ತು. ವ್ಯಾಸರ ಮಹಾಭಾರತವನ್ನಾಧರಿಸಿಯೇ ಮೂಡಿ ಬಂದಿದ್ದ ಧಾರಾವಾಹಿ ಅದು. ಸುಮಾರು 2 ವರ್ಷಗಳ ಕಾಲ 94 ಎಪಿಸೋಡ್ಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿ ಆ ದಿನಗಳಲ್ಲಿ ಅತ್ಯಂತ ಹೆಚ್ಚು ಟಿ ಆರ್ ಪಿ ಗಳಿಸಿದ ಹೆಮ್ಮೆ ಹೊಂದಿತ್ತು. ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ರಸ್ತೆಗಳೆಲ್ಲ ಖಾಲಿಯಿರುತ್ತಿದ್ದವಂತೆ ಎಂದರೆ ಅದರ ಜನಪ್ರಿಯತೆ ಎಷ್ಟಿತ್ತು ಎಂದು ತಿಳಿಯಬಹುದು. ನಮಗೆಲ್ಲ ಟಿ ವಿ ಎಂಬುದು ಒಂದು ಮಾಯಾಪೆಟ್ಟಿಗೆಯಾಗಿ, ಸುಲಭವಾಗಿ ಕೈಗೆಟುಕದ ವಸ್ತುವಾಗಿದ್ದ ಕಾಲ ಅದು. ನನ್ನೂರಿನಲ್ಲೆಲ್ಲೂ ಟಿ ವಿ ಇರಲಿಲ್ಲ. ನಂತರದ ದಿನಗಳಲ್ಲಿ ಧಾರವಾಹಿಯ ಬಗ್ಗೆ ಕೇಳಿ ಕುತೂಹಲಿಯಾಗಿದ್ದ ನಾನು ನೋಡಬೇಕೆಂದುಕೊಂಡಿದ್ದೆ . ಈಗ ಸಂಪೂರ್ಣ ಧಾರವಾಹಿಯ ಎಂಟು ಡಿವಿಡಿಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ' ಮಹಾಭಾರತ' ಧಾರಾವಾಹಿ ಒಂದು ಅದ್ಭುತ ನಿರ್ಮಾಣ ಎನ್ನಿಸುತ್ತಿದೆ. ಈ ಧಾರಾವಾಹಿ ಹಾಗೂ ರಮಾನಂದ ಸಾಗರ್ ಅವರ ರಾಮಾಯಣ ಇವೆರಡೂ ನಿರ್ಮಾಣವಾಗಲು ರಾಜೀವ್ ಗಾಂಧಿ ಕಾರಣ ಎಂಬ ಅಂತರ್ಜಾಲದ ಬರಹವೊಂದನ್ನು ಓ