ಸಾಗಿ ಬಂದ ತೀರ ( ಕಥೆ )
ಶ ರತ್ಚಂದ್ರ ಕಾಫಿ ಹೀರುತ್ತಾ ಕುರ್ಚಿಯಲ್ಲಿ ಕುಳಿತಿದ್ದ ಬಲಗೈಯಲ್ಲಿ ಯಾವುದೋ ಪುಸ್ತಕ ಇತ್ತು. ತುಂಬಾ ಆಳವಾಗಿ ಅದರಲ್ಲಿಯೇ ಮುಳುಗಿದ್ದ. "ಮಾಮ...ಮಾಮ...ಇಲ್ನೋಡು" ಕುಣಿ ಕುಣಿಯುತ್ತಾ ಬಂದ ಶಾಶ್ವತಿ ಶರತ್ಚಂದ್ರನ ತೊಡೆಯಮೇಲೆಯೇ ಕುಳಿತಳು. " ಇದೇನು ಪುಟ್ಟಿ, ಇದೆಲ್ಲಿಂದ ತಂದೆ ಲೋಟನ? ಅಮ್ಮ ಏನಾದ್ರೂ ತರೊದಕ್ಕೆ ಲೋಟ ಕೊಟ್ಟು ಕಳಿಸಿದ್ರ" ಶರತ್ಚಂದ್ರ ಸಹಜವಾಗಿಯೇ ಕೇಳಿದ ಆಕೆಯನ್ನು ದಿಟ್ಟಿಸುತ್ತ. " ಇಲ್ಲ ಮಾಮ, ಇದು ನಂಗೆ ಬಹುಮಾನ ಬಂದ ಲೋಟ. ಇವತ್ತು ನಾನು ಹಾಡಲ್ಲಿ ಫಸ್ಟ್ ಬಂದೆ. ಅದಕ್ಕೆ ಕೊಟ್ಟಿದ್ದು" ಹೆಮ್ಮೆಯಿಂದ ತೋರಿಸುತ್ತ ಹೇಳಿದಳು. "ಹೌದ...! ಜಾಣೆ ನೀನು. ಯಾವಾಗಲೂ ಹೀಗೆ ಬಹುಮಾನ ತಗೋಳತಾನೇ ಇರಬೇಕು ನೀನು" ಆಕೆಯನ್ನು ಮುದ್ದಿಸುತ್ತ ಹೇಳಿದ. ಬಹುಮಾನವಾಗಿ ಬಂದ ಚಿಕ್ಕ ಲೋಟಕ್ಕೆ ಅವಳು ಪಡುತ್ತಿರುವ ಖುಷಿ ನೋಡಿ ಶರತ್ಚಂದ್ರನಿಗೂ ಖುಷಿಯಾಯಿತು. " ಹೋಗು, ಅಜ್ಜಿಗೆ ತೋರಿಸು ಹೋಗು" ಎಂದು ಶರತ್ಚಂದ್ರ ಹೇಳುವುದರೊಳಗಾಗಿ ಶಾಶ್ವತಿ ಕೆಳಗಿಳಿದು ಅಡುಗೆಮನೆಯ ಕಡೆಗೆ ಓಡಿದಳು " ಅಜ್ಜೀ" ಎಂದು ಕೂಗುತ್ತ. ಶರತ್ಚಂದ್ರ ಆಕೆಯ ಕಡೆಗೇ ನೋಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ " ಎಷ್ಟು ಚುರುಕಿನ ಹುಡುಗಿ. ಸಾವಿರ ಮಾತು ಪಟಪಟ ಆಡ್ತಾನೇ ಇರ್ತಾಳೆ. ಹಾಡು ಶೇಡಿ ಅಂತೇನೇ ಇದ್ರೂ 'ನಾನು ನಾನು' ಅಂತ ಓಡಿ ಬರ್ತಾಳೆ. ಶಾ